ಕರ್ನಾಟಕ

karnataka

ETV Bharat / business

ಮೋದಿಯ ಸ್ವದೇಶಿ ಮಂತ್ರ ಎಫೆಕ್ಟ್​: ಮೇಡ್​ ಇನ್​ ಇಂಡಿಯಾ ಮರ್ಸಿಡೀಸ್​ ಬೆಂಝ್​ AMG ಕಾರ್​ ಉತ್ಪಾದನೆ ಶುರು - ಮೇಡ್ ಇನ್​ ಇಂಡಿಯಾ ಕಾರು ತಯಾರಿಕೆ

ಮರ್ಸಿಡಿಸ್ ಬೆಂಜ್ ಮಂಗಳವಾರ ಭಾರತದಲ್ಲಿ ತಯಾರಿಸಿದ ಮೊಟ್ಟಮೊದಲ ಎಎಂಜಿ ವಾಹನದ ಸ್ಥಳೀಯ ಉತ್ಪಾದನೆ ಪ್ರಾರಂಭಿಸಿದೆ. ಎಎಂಜಿ ಜಿಎಲ್​ಸಿ 43 ಮ್ಯಾಟಿಕ್ ಕೂಪೆ ಮಾದರಿಯ ಕಾರಿಗೆ ₹ 76.7 ಲಕ್ಷ ( ಭಾರತದಲ್ಲಿ ಎಕ್ಸ್ ಶೋ ರೂಮ್​) ದರ ನಿಗದಿಪಡಿಸಿದೆ.

MERCEDES
ಮರ್ಸಿಡೀಸ್

By

Published : Nov 4, 2020, 9:29 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಎಂಎನ್​ಸಿ ಕಂಪನಿಗಳು ಅಳವಡಿಸಿಕೊಳ್ಳುತ್ತಿವೆ. ಐಷರಾಮಿ ಕಾರು ತಯಾರಕ ಮರ್ಸಿಡೀಸ್ ಬೆಂಝ್​, ಸ್ವದೇಶಿ ನಿರ್ಮಿತ ಕಾರು ತಯಾರಿಕಗೆ ಪ್ರಾರಂಭಿಸಿದೆ.

ಮರ್ಸಿಡಿಸ್ ಬೆಂಜ್ ಮಂಗಳವಾರ ಭಾರತದಲ್ಲಿ ತಯಾರಿಸಿದ ಮೊಟ್ಟಮೊದಲ ಎಎಂಜಿ ವಾಹನದ ಸ್ಥಳೀಯ ಉತ್ಪಾದನೆ ಪ್ರಾರಂಭಿಸಿದೆ. ಎಎಂಜಿ ಜಿಎಲ್​ಸಿ 43 ಮ್ಯಾಟಿಕ್ ಕೂಪೆ ಮಾದರಿಯ ಕಾರಿಗೆ ₹ 76.7 ಲಕ್ಷ ( ಭಾರತದಲ್ಲಿ ಎಕ್ಸ್ ಶೋ ರೂಮ್​) ದರ ನಿಗದಿಪಡಿಸಿದೆ.

ಈ ಬೆಳವಣಿಗೆಯೊಂದಿಗೆ ಮರ್ಸಿಡೀಸ್ ಬೆಂಝ್​ ಇಂಡಿಯಾ, ತನ್ನ ನ್ಯೂ ಜನರೇಷನ್ ಕಾರ್ಸ್ (ಎನ್‌ಜಿಸಿ), ಸೆಡಾನ್, ಎಸ್‌ಯುವಿ ಜೊತೆಗೆ ಈಗ ಎಎಂಜಿ ಪರ್ಫಾರ್ಮೆನ್ಸ್ ಕಾರುಗಳನ್ನು ಉತ್ಪಾದಿಸಲಿದೆ ಎಂದು ಕಂಪನಿ ತಿಳಿಸಿದೆ.

ಪುಣೆಯಲ್ಲಿ ಕಂಪನಿಯ ಉತ್ಪಾದನಾ ಘಟಕವಿದ್ದು, ವಾರ್ಷಿಕವಾಗಿ 20,000 ಯೂನಿಟ್​ಗಳ ತಯಾರಿಕರ ಸಾಮರ್ಥ್ಯ ಹೊಂದಿದೆ. ಈ ಘಟಕವು ಎಎಮ್‌ಜಿ ಜಿಎಲ್‌ಸಿ 43 ಮ್ಯಾಟಿಕ್ ಕೂಪೆ ಸೇರ್ಪಡೆಯೊಂದಿಗೆ ತನ್ನ ಸ್ಥಳೀಯ ಉತ್ಪಾದನಾ ಬಂಡವಾಳ ವಿಸ್ತರಿಸುತ್ತದೆ. ಮರ್ಸಿಡಿಸ್ ಬೆಂಜ್ ಈಗ ಭಾರತದಲ್ಲಿ 11 ಮಾದರಿಗಳನ್ನು ತಯಾರಿಸುತ್ತಿದೆ.

ಭಾರತದ ಅತಿದೊಡ್ಡ ಐಷಾರಾಮಿ ಕಾರು ಉತ್ಪಾದನಾ ಸೌಲಭ್ಯದಿಂದ ಸ್ಥಳೀಯವಾಗಿ ತಯಾರಿಸಿ ಎಎಂಜಿ ಅನ್ನು ಹೊರತರುವುದು ನಮಗೆ ಹೆಮ್ಮೆಯ ಸಾಧನೆ. ಎಎಂಜಿಯ ಸ್ಥಳೀಯ ಉತ್ಪಾದನೆಯು ಭಾರತದಲ್ಲಿ ಪರ್ಫಾರ್ಮೆನ್ಸ್ ಬ್ರಾಂಡ್‌ನ ಜನಪ್ರಿಯತೆ ಮತ್ತಷ್ಟು ಹೆಚ್ಚಿಸುತ್ತದೆ. ಈ ಕಾರ್ಯಕ್ಷಮತೆ ಮೋಟಾರಿಂಗ್ ಉತ್ಸಾಹಿಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಎಎಂಜಿಯ ಸ್ಥಳೀಯ ಉತ್ಪಾದನೆಯು ಡೈನಾಮಿಕ್ ಇಂಡಿಯನ್ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಸ್ಪರ್ಧೆಯೊಡ್ಡಲು ನೆರವಾಗಲಿದೆ ಎಂದು ಮರ್ಸಿಡೀಸ್ ಬೆಂಝ್ ಇಂಡಿಯಾದ ಎಂಡಿ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿದ್ದಾರೆ.

ABOUT THE AUTHOR

...view details