ನವದೆಹಲಿ :ದೋಷಯುಕ್ತ ಇಂಧನ ಪಂಪ್‌ಗಳನ್ನು ಬದಲಿಸಲು 1,34, 885 ಯುನಿಟ್ ವ್ಯಾಗನ್ಆರ್ ಮತ್ತು ಬಲೆನೊ ಕಾರುಗಳನ್ನು ವಾಪಸ್ ಪಡೆಯುವುದಾಗಿ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತಿಳಿಸಿದೆ.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ), ಎಂಎಸ್ಐನಿಂದ ಬಲೆನೊ ಮತ್ತು ಗ್ಲ್ಯಾನ್ಜಾ ಎಂದು ಮಾರಾಟ ಮಾಡುತ್ತದೆ. ಅಂತಹದೇ ಸಮಸ್ಯೆಯನ್ನು ಪರಿಹರಿಸಲು ಸುಮಾರು 6,500 ಯುನಿಟ್ಗಳನ್ನು ಹಿಂದಕ್ಕೆ ಪಡೆಯಲಿದೆ. 2018ರ ನವೆಂಬರ್ 15ರಿಂದ 2019ರ ಅಕ್ಟೋಬರ್ 15ರ ನಡುವೆ ತಯಾರಿಸಿದ ವ್ಯಾಗನ್-ಆರ್ ಮತ್ತು 2019ರ ಜನವರಿ 8ರಿಂದ 2019ರ ನವೆಂಬರ್ 4ರ ನಡುವೆ ತಯಾರಾದ ಬಲೆನೊ (ಪೆಟ್ರೋಲ್) ಕಾರುಗಳನ್ನು ಸ್ವಯಂಪ್ರೇರಣೆಯಿಂದ ವಾಪಸ್ ಪಡೆಯಲಾಗುತ್ತಿದೆ ಎಂದು ಎಂಎಸ್ಐ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಧನ ಪಂಪ್‌ನ ಸಂಭವನೀಯ ಸಮಸ್ಯೆ ಪರಿಹಾರಕ್ಕೆ ಕಂಪನಿಯು 56,663 ಯುನಿಟ್ ವ್ಯಾಗನ್-ಆರ್ ಮತ್ತು 78,222 ಯುನಿಟ್ ಬಲೆನೊ ಕಾರುಗಳನ್ನು ಪರಿಶೀಲಿಸುತ್ತದೆ. ದೋಷಯುಕ್ತ ಭಾಗವನ್ನು ಉಚಿತವಾಗಿ ಬದಲಾಯಿಸಲಾಗುವುದು. ಈ ಮರುಪಡೆಯುವಿಕೆ ಅಭಿಯಾನದ ಅಡಿ ಶಂಕಿತ ವಾಹನಗಳ ಮಾಲೀಕರು ನಿಗದಿತ ಸಮಯದಲ್ಲಿ ಕಂಪನಿಯ ಅಧಿಕೃತ ವಿತರಕರನ್ನು ಸಂಪರ್ಕಿಸಬೇಕು ಎಂದು ಎಂಎಸ್‌ಐ ಮನವಿ ಮಾಡಿದೆ.
ಟಿಕೆಎಂನ 6,500 ಕಾರು ಹಿಂದಕ್ಕೆ :ನಮ್ಮ ಗ್ರಾಹಕರ ಬದ್ಧತೆಗೆ ಅನುಗುಣವಾಗಿ ಮತ್ತು ಅವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು, ಕಂಪನಿಯು 2019ರ ಏಪ್ರಿಲ್ 2ರಿಂದ 2019ರ ಅಕ್ಟೋಬರ್ 6ರ ನಡುವೆ ತಯಾರಾದ ಗ್ಲ್ಯಾನ್ಜಾ ಕಾರುಗಳನ್ನು ಸ್ವಯಂಪ್ರೇರಣೆಯಿಂದ ಹಿಂದಕ್ಕೆ ಪಡೆಯುತ್ತಿದ್ದೇವೆ. ಕಂಪನಿಯು ತನ್ನ ಅಧಿಕೃತ ಮಾರಾಟಗಾರರ ಮೂಲಕ ಇಂಧನ ಪಂಪ್ ಮೋಟರ್‌ನೊಂದಿಗೆ ಸಂಭವನೀಯ ಸಮಸ್ಯೆ ಇತ್ಯರ್ಥಪಡಿಸಲಿದೆ. ಗ್ಲ್ಯಾನ್ಜಾದ ಸುಮಾರು 6,500 ವಾಹನಗಳನ್ನು ಮರುಪಡೆಯಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.