ನವದೆಹಲಿ: 2020ರಲ್ಲಿ 1,60,700 ಯುನಿಟ್ಗಳಷ್ಟು ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾದ ಕಾರು ಮಾದರಿಯಾಗಿ ಹೊರಹೊಮ್ಮಿದೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
2005ರಿಂದ ಆರಂಭವಾದ ಹ್ಯಾಚ್‌ಬ್ಯಾಕ್ ಸ್ವಿಫ್ಟ್ ಕಾರು 2020ರ ತನಕ 23 ಲಕ್ಷ ಯುನಿಟ್‌ಗಳ ಸಂಚಿತ ಮಾರಾಟದ ಮೈಲಿಗಲ್ಲು ದಾಟಿದೆ. 2010ರಲ್ಲಿ 5 ಲಕ್ಷ ಮೈಲಿಗಲ್ಲು, 2013ರಲ್ಲಿ 10 ಲಕ್ಷ ಮತ್ತು 2016ರಲ್ಲಿ 15 ಲಕ್ಷಗಳ ಮಾರಾಟ ದಾಟಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರುತಿ ಸುಜುಕಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ / ಸೇಲ್ಸ್) ಶಶಾಂಕ್ ಶ್ರೀವಾಸ್ತವ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ವಿಫ್ಟ್ ಕಳೆದ 15 ವರ್ಷಗಳಿಂದ ದೇಶದಲ್ಲಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, 2.3 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದ್ದಾರೆ.