ನವದೆಹಲಿ:ಚಿಲ್ಲರೆ ಖರೀದಿದಾರರಿಗೆ ಆಟೋ ರಿಟೇಲ್ ಹಣಕಾಸಿನ ನೆರವು ಒದಗಿಸಲು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ- ಚೋಳಮಂಡಲಂ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿವೆ..
ಬೈ-ನೌ-ಪೇ-ಲೇಟರ್ ಆಫರ್' (ಈಗ ಖರೀದಿಸಿ ನಂತರ ಪಾವತಿಸಿ) ಎಂಬ ನೂತನ ಹಣಕಾಸು ಆಯ್ಕೆಯನ್ನು ಗ್ರಾಹಕರ ಮುಂದಿ ಇರಿಸಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.
ಜಂಟಿ ಸಹಭಾಗಿತ್ವದಲ್ಲಿ ಕಂಪನಿಗಳು ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟಿನ ಮಧ್ಯೆ ಸಂಪನ್ಮೂಲ ಬಿಕ್ಕಟ್ಟಿನಲ್ಲಿರುವ ಕಾರು ಖರೀದಿ ಗ್ರಾಹಕರಿಗೆ ಎರಡು ತಿಂಗಳ ಇಎಂಐ ವಿನಾಯತಿ ನೀಡಲಾಗುತ್ತದೆ ಎಂದು ಹೇಳಿದೆ.
ನೂತನ ಗ್ರಾಹಕರಿಗೆ 60 ದಿನಗಳ ಸಾಲ ವಿತರಣೆಯ ನಂತರ ಇಎಂಐ ಪಾವತಿ ಅನ್ವಯವಾಗುತ್ತದೆ. ಆಯ್ದ ಮಾರುತಿ ಸುಜುಕಿ ಮಾದರಿಗಳಲ್ಲಿ ಈ ಕೊಡುಗೆ ಲಭ್ಯವಿದೆ. 2020ರ ಜೂನ್ 30ರವರೆಗೆ ಸಾಲ ವಿತರಣೆಯಲ್ಲಿ ಅನ್ವಯವಾಗಲಿದೆ ಎಂದು ತಿಳಿಸಿದೆ.