ನವದೆಹಲಿ: ಸಂಭಾವ್ಯ ಕಾರು ಖರೀದಿದಾರರಿಗೆ ವಾಹನ ಹಣಕಾಸು ಆಯ್ಕೆ ಒದಗಿಸಲು ಕರ್ನಾಟಕ ಬ್ಯಾಂಕ್ ಜತೆ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ.
ಮಂಗಳೂರು ಪ್ರಧಾನ ಕಚೇರಿ ಹೊಂದಿರುವ ಖಾಸಗಿ ವಲಯದ ಸಾಲದಾತ ಕರ್ನಾಟಕ ಬ್ಯಾಂಕ್ ಜತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗ್ರಾಹಕರು ಕರ್ನಾಟಕ ಬ್ಯಾಂಕಿನ 858 ಶಾಖೆಗಳಲ್ಲಿ ಮೆಟ್ರೋ, ನಗರ, ಅರೆ ನಗರ ಮತ್ತು ಗ್ರಾಮೀಣ ಸ್ಥಳಗಳಲ್ಲಿ ಒಪ್ಪಂದದ ಲಾಭ ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರು ಮಾರುತಿ ಸುಜುಕಿ ಅರೆನಾ ಮತ್ತು ನೆಕ್ಸಾ ಶೋ ರೂಂಗಳಿಂದ ಎಲ್ಲ ಹೊಸ ಕಾರುಗಳ ಆನ್ - ರೋಡ್ ಬೆಲೆಯ ಶೇ 85ರಷ್ಟು ಸಾಲ ಪಡೆಯಬಹುದು. ಗ್ರಾಹಕರು ತಮ್ಮ ಸಾಲಕ್ಕಾಗಿ 84 ತಿಂಗಳ ಅವಧಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.