ಕರ್ನಾಟಕ

karnataka

ETV Bharat / business

4 ವರ್ಷಗಳಲ್ಲಿ 70 ಸಾವಿರ ಸೂಪರ್​ ಕ್ಯಾರಿ ವಾಹನ ಮಾರಿದ ಮಾರುತಿ ಸುಜುಕಿ - ಮಾರುತಿ ಮಿನಿ ಟ್ರಕ್​

ಉತ್ತಮವಾದ ಮೈಲೇಜ್ ನಿರೀಕ್ಷಿಸುವ ಭಾರತೀಯ ಮಿನಿ ಟ್ರಕ್ ಗ್ರಾಹಕರಿಗಾಗಿ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಶಶಾಂಕ್ ಶ್ರೀವಾಸ್ತವ ಹೇಳುತ್ತಾರೆ.

Maruti
ಮಾರುತಿ

By

Published : Dec 25, 2020, 5:18 PM IST

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ತನ್ನ ಲಘು ವಾಣಿಜ್ಯ ವಾಹನವಾದ 'ಸೂಪರ್ ಕ್ಯಾರಿ' ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕು ವರ್ಷಗಳಲ್ಲಿ 70,000 ಯುನಿಟ್‌ಗಳ ಮಾರಾಟ ಮಾಡಿದೆ.

ಈ ಆಟೋ ಮೇಜರ್ 2016ರಲ್ಲಿ ಸೂಪರ್ ಕ್ಯಾರಿಯೊಂದಿಗೆ ವಾಣಿಜ್ಯ ವಾಹನ ವಿಭಾಗಕ್ಕೆ ಕಾಲಿಟ್ಟಿತ್ತು. ಈ ಮೂಲಕ 70,000ಕ್ಕೂ ಅಧಿಕ ಮಿನಿ ಟ್ರಕ್​ಗಳನ್ನು ಈಗಾಗಲೇ ಮಾರಾಟ ಮಾಡಿದೆ. ಈ ವಾಹನಗಳ ಮಾಲೀಕರಿಗೆ ತಮ್ಮ ವ್ಯವಹಾರಗಳ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಎಂಎಸ್ಐ ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ:ನೀರು ದುಬಾರಿ! ಸ್ಟಾಕ್​ ಮಾರ್ಕೆಟ್​​​​ನಲ್ಲಿ ನೀರು ಮಾರುವ ಚರ್ಚೆ: ಕಾಸು ಕೊಟ್ಟು ಜೀವಜಲ ಬೇಡುವ ದುಃಸ್ಥಿತಿ!

ಉತ್ತಮವಾದ ಮೈಲೇಜ್ ಗೌರವಿಸುವ ಭಾರತೀಯ ಮಿನಿ ಟ್ರಕ್ ಗ್ರಾಹಕರಿಗಾಗಿ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಸೂಪರ್ ಕ್ಯಾರಿ ತನ್ನ ಭರವಸೆ ಈಡೇರಿಸಿದೆ ಎಂದು ಎಂಎಸ್ಐ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ & ಸೇಲ್ಸ್) ಶಶಾಂಕ್ ಶ್ರೀವಾಸ್ತವ ಹೇಳುತ್ತಾರೆ.

ಸೂಪರ್ ಕ್ಯಾರಿ ಅಲ್ಪಾವಧಿಯಲ್ಲಿಯೇ ಒಂದು ಉತ್ತಮ ಸ್ಥಾನ ಸೃಷ್ಟಿಸಿದೆ. ಲಘು ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಎರಡನೇ ಮಾದರಿಯಾಗಿದೆ ಎಂದರು.

ಈ ಮಾದರಿಯು 2019-20ರಲ್ಲಿ ಶೇ 15 ಮತ್ತು 2020-21ರಲ್ಲಿ ಸುಮಾರು 20ರಷ್ಟು ಮಾರುಕಟ್ಟೆ ಪಾಲು ದಾಖಲಿಸಿದೆ. ಸೂಪರ್ ಕ್ಯಾರಿ ಅನ್ನು ಇ-ಕಾಮರ್ಸ್, ಕೊರಿಯರ್, ಎಫ್‌ಎಂಸಿಜಿ ಮತ್ತು ಸರಕು ವಿತರಣೆ ಸೇರಿದಂತೆ ಅನೇಕ ಕಡೆ ಬಳಸಲಾಗುತ್ತದೆ.

ABOUT THE AUTHOR

...view details