ಕರ್ನಾಟಕ

karnataka

ETV Bharat / business

ವಾಹನೋದ್ಯಮಕ್ಕೆ ಆಘಾತ... ಸತತ 8ನೇ ತಿಂಗಳು ಉತ್ಪಾದನೆ ಕಡಿತಗೊಳಿಸಿದ ಮಾರುತಿ ಸುಜುಕಿ - Maruti Suzuki News

ಮಾರುತಿ ಸುಜುಕಿ ಕಂಪನಿಯು ಸೆಪ್ಟೆಂಬರ್‌ನಲ್ಲಿ ಒಟ್ಟು 1,32,199 ಯುನಿಟ್‌ಗಳನ್ನು ಉತ್ಪಾದಿಸಿದ್ದು, ಹಿಂದಿನ ವರ್ಷದಲ್ಲಿ 1,60,219 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಯಾಣಿಕ ವಾಹನಗಳ ಉತ್ಪನ್ನ ಸಹ ಕಳೆದ ತಿಂಗಳಲ್ಲಿ 1,30,264 ಯುನಿಟ್​​ಗಳಿಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1,57,657 ಯುನಿಟ್​ಗಳನ್ನು ಮಾರಾಟ ಮಾಡಲಾಗಿತ್ತು. ಈ ಒಂದು ವರ್ಷದ ಅವಧಿಯಲ್ಲಿ ಶೇ 17.37ರಷ್ಟು ಇಳಿಕೆ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 8, 2019, 3:17 PM IST

ನವದೆಹಲಿ: ದೀರ್ಘಕಾಲದ ಮಂದಗತಿಗೆ ಸಿಲುಕಿರುವ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೆಪ್ಟೆಂಬರ್‌ನಲ್ಲಿ ತನ್ನ ಉತ್ಪಾದನೆಯನ್ನು ಶೇ 17.48 ರಷ್ಟು ಕಡಿಮೆ ಮಾಡಿತು. ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯು ತನ್ನ ಉತ್ಪಾದನೆಯನ್ನು ಸತತ ಎಂಟನೇ ತಿಂಗಳು ಕಡಿಮೆ ಮಾಡಿದೆ.

ಕಂಪನಿಯು ಸೆಪ್ಟೆಂಬರ್‌ನಲ್ಲಿ ಒಟ್ಟು 1,32,199 ಯುನಿಟ್‌ಗಳನ್ನು ಉತ್ಪಾದಿಸಿದ್ದು, ಹಿಂದಿನ ವರ್ಷದಲ್ಲಿ 1,60,219 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಪ್ರಯಾಣಿಕ ವಾಹನಗಳ ಉತ್ಪನ್ನ ಸಹ ಕಳೆದ ತಿಂಗಳಲ್ಲಿ 1,30,264 ಯುನಿಟ್​​ಗಳಿಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1,57,657 ಯುನಿಟ್​ಗಳನ್ನು ಮಾರಾಟ ಮಾಡಲಾಗಿತ್ತು. ಈ ಒಂದು ವರ್ಷದ ಅವಧಿಯಲ್ಲಿ ಶೇ 17.37ರಷ್ಟು ಇಳಿಕೆ ದಾಖಲಾಗಿದೆ.

ಆಲ್ಟೊ, ನ್ಯೂ ವ್ಯಾಗನ್ಆರ್, ಸಿಲೆರಿಯೊ, ಇಗ್ನಿಸ್, ಸ್ವಿಫ್ಟ್, ಬಲೆನೊ ಮತ್ತು ಡಿಸೈರ್ ಸೇರಿದಂತೆ ಮಿನಿ ಮತ್ತು ಕಾಂಪ್ಯಾಕ್ಟ್ ವಿಭಾಗದ ಕಾರುಗಳ ಉತ್ಪಾದನೆಯು 98,337 ಯುನಿಟ್ ಆಗಿದ್ದು, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ 1,15,576 ಯುನಿಟ್​​ ಇದ್ದದ್ದು, ಶೇ 14.91ರಷ್ಟು ಕುಸಿದಿದೆ.

ABOUT THE AUTHOR

...view details