ವಡೋದರಾ:ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪಾವತಿಯಲ್ಲಿ ವಂಚನೆ ಎಸಗಿದ ಆಪಾದನೆಯಡಿ ಗುಜರಾತ್ ಮೂಲದ ಮನ್ಪಸಂದ್ ಬಿವರೇಜಸ್ ಲಿಮಿಟೆಡ್ ಕಂಪೆನಿಯ ಮುಖ್ಯಸ್ಥರನ್ನು ಬಂಧಿಸಲಾಗಿದೆ.
ಕಂಪೆನಿಯ ಬಿಎಸ್ಇ ಫೈಲಿಂಗ್ ಪ್ರಕಾರ, ಕೇಂದ್ರ ಜಿಎಸ್ಟಿ ಹಾಗೂ ಕಸ್ಟಮ್ಸ್ ಕಮಿಷನರ್ ತಂಡ ಮೇ 23 ರಂದು ಕಂಪನಿಯ ತೆರಿಗೆ ಪಾವತಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಶೋಧನೆ ನಡೆಸಿ ಕೆಲವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಮೇ 24ರಂದು ಜಿಎಸ್ಟಿ ಭವನ ಕಚೇರಿಯಲ್ಲಿ ಮತ್ತಷ್ಟು ತನಿಖೆ ನಡೆಸಿದಾಗ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸಿದ್ದು, ಆಪಾದಿತರನ್ನು ವಶಕ್ಕೆ ಪಡೆದಿದ್ದಾರೆ.