ನವದೆಹಲಿ:ದೇಶೀಯ ವಾಹನ ತಯಾರಕ ಮಹೀಂದ್ರಾ ಅಂಡ್ ಮಹೀಂದ್ರಾ ಗುರುವಾರ 1,577 ಯುನಿಟ್ ಥಾರ್ ಎಸ್ಯುವಿ ಡೀಸೆಲ್ ಮರುಪಡೆಯುತ್ತಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಬಹುನಿರೀಕ್ಷಿತ ಥಾರ್ನ ಇಂಜಿನ್ಗಳಲ್ಲಿನ ಸಮಸ್ಯೆಗಳಿಂದಾಗಿ ಅವುಗಳನ್ನು ಬದಲಾಯಿಸುತ್ತಿದೆ. ಸೆಪ್ಟೆಂಬರ್ 7 ಮತ್ತು ಡಿಸೆಂಬರ್ 25ರ ನಡುವೆ ತಯಾರಾದ ಈ ವಾಹನಗಳನ್ನು ಕ್ಯಾಮ್ಶಿಫ್ಟ್ ವ್ಯವಸ್ಥೆಯಲ್ಲಿನ ದೋಷಗಳನ್ನು ಪರಿಶೀಲಿಸಿ ಅಗತ್ಯವಿದ್ದರೆ ಬದಲಾವಣೆ ಮಾಡಲಾಗುವುದು ಎಂದಿದೆ.
ಆ ದಿನಾಂಕಗಳಲ್ಲಿ ನಮಗೆ ಬಿಡಿ ಭಾಗಗಳನ್ನು ಪೂರೈಸುವ ಪ್ಲಾಂಟ್ಗಳ ಯಂತ್ರೋಪಕರಣಗಳಲ್ಲಿ ದೋಷಗಳಿವೆ. ಆ ಪರಿಣಾಮ ಕೆಲವು ಡೀಸೆಲ್ ಇಂಜಿನ್ ಸರಿಪಡಿಸುವ ಸಾಧ್ಯತೆಯಿದೆ ಎಂದು ನಿಯಂತ್ರಕ ಫೈಲಿಂಗ್ನಲ್ಲಿ ಮಹೀಂದ್ರಾ ಹೇಳಿದೆ.