ಕರ್ನಾಟಕ

karnataka

ETV Bharat / business

ಎಂ & ಎಂ 3ನೇ ತ್ರೈಮಾಸಿಕದ ತೆರಿಗೆ ನಂತರ ಆದಾಯದಲ್ಲಿ ಶೇ 90ರಷ್ಟು ಕುಸಿತ - ಎಂ&ಎಂ 3ನೇ ತ್ರೈಮಾಸಿಕ ಆದಾಯ

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು 170.69 ಕೋಟಿ ರೂ. ತೆರಿಗೆ ನಂತರದ ಏಕೀಕೃತ ಲಾಭ ದಾಖಲಿಸಿದೆ. ಪರಿಶೀಲನೆಯ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಒಟ್ಟು ಆದಾಯ 21,625.95 ಕೋಟಿ ರೂ.ಗಳಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 19,430.29 ಕೋಟಿ ರೂ.ಯಷ್ಟಿತ್ತು ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

Mahindra
Mahindra

By

Published : Feb 5, 2021, 5:54 PM IST

ನವದೆಹಲಿ:ಡಿಸೆಂಬರ್‌ನಲ್ಲಿ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ದೇಶೀಯ ಕೃಷಿ ಉಪಕರಣ ಮತ್ತು ಯುಟಿಲಿಟಿ ವಾಹನ ತಯಾರಕ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (ಎಂ & ಎಂ) ತೆರಿಗೆ ನಂತರದ ಏಕೀಕೃತ ಲಾಭದಲ್ಲಿ ಶೇ 6ರಷ್ಟು ಕುಸಿತ ಕಂಡು 159.6 ಕೋಟಿ ರೂ.ಯಷ್ಟಾಗಿದೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿ 170.69 ಕೋಟಿ ರೂ. ತೆರಿಗೆ ನಂತರದ ಏಕೀಕೃತ ಲಾಭ ದಾಖಲಿಸಿದೆ. ಪರಿಶೀಲನೆಯ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಒಟ್ಟು ಆದಾಯ 21,625.95 ಕೋಟಿ ರೂ.ಗಳಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 19,430.29 ಕೋಟಿ ರೂ.ಯಷ್ಟಿತ್ತು ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಆರ್​​ಬಿಐನ ಆಂತರಿಕ ಸಮಿತಿ ಡಿಜಿಟಲ್​ ಕರೆನ್ಸಿಗೆ ಒಂದು ಚೌಕಟ್ಟು ತರಲಿದೆ: ಡೆಪ್ಯುಟಿ ಗವರ್ನರ್​

ಏಕೀಕೃತ ಹಣಕಾಸು ಪ್ರಕಟಣೆಯಲ್ಲಿ, ಎಸ್‌ವೈಎಂಸಿ (ಸಾಂಗ್‌ಯಾಂಗ್ ಮೋಟಾರ್ ಕಂಪನಿ) ಕಾರ್ಯಾಚರಣೆಯಿಂದ ಉಂಟಾದ ನಷ್ಟ ಮತ್ತು ಇತರ ದುರ್ಬಲತೆಯ ಒಟ್ಟು ನಷ್ಟದ ಪ್ರಮಾಣ 1,938.35 ಕೋಟಿ ರೂ.ಯಾಗಿದೆ.

ಎಸ್‌ವೈಎಂಸಿ ಪುನಶ್ಚೇತನ ಪ್ರಕ್ರಿಯೆ ಪ್ರಾರಂಭಿಸಲು ದಿವಾಳಿತನ ನ್ಯಾಯಾಲಯಕ್ಕೆ 2020ರ ಡಿಸೆಂಬರ್ 21ರಂದು ಅರ್ಜಿ ಸಲ್ಲಿಸಿತ್ತು. ಹೂಡಿಕೆದಾರರಿಂದ ಈಕ್ವಿಟಿ ಹೂಡಿಕೆ ಮತ್ತು ಸ್ಥಳೀಯ ಸಾಲದಾತರಿಂದ ಪಡೆದ ಸಾಲದೊಂದಿಗೆ ಪೂರ್ವ ಪ್ಯಾಕೇಜ್ ಪುನರ್ವಸತಿ ಯೋಜನೆ (ಪಿ-ಯೋಜನೆ) ಸಲ್ಲಿಸಲು ಈಗ ಯೋಜಿಸುತ್ತಿದೆ. 2020-21ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಎಂ&ಎಂ ಮಾನ್ಯತೆ ಹೆಚ್ಚಿಲ್ಲ ಎಂದು ಹೇಳಿದೆ.

ಸ್ವತಂತ್ರ ಆಧಾರದ ಮೇಲೆ ಎಂ&ಎಂನ ತೆರಿಗೆ ನಂತರದ ಲಾಭದಲ್ಲಿ ಶೇ 90ರಷ್ಟು ಕುಸಿತವಾಗಿ 30.93 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ ಇದು 306.55 ಕೋಟಿ ರೂ.ಗಳಷ್ಟಿತ್ತು.

ABOUT THE AUTHOR

...view details