ಕರ್ನಾಟಕ

karnataka

ETV Bharat / business

ವಿಶ್ವದ ದುಬಾರಿ ವಿಚ್ಛೇದನದ ಜೀವನಾಂಶ ಮೊತ್ತ ಕೇಳಿದ್ರೆ ಬೆಚ್ಚಿಬಿಳ್ತಿರಾ..! -

ಜೆಫ್ ಬೆಜೋಸ್ - ಮೆಕೆಂಜಿ ಬೆಜೋಸ್ ಅವರ ವಿಚ್ಛೇದನದ ಜೀವನಾಂಶ ಮೊತ್ತವು ಜಗತ್ತಿನಲ್ಲಿ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರಲ್ಲಿ ಮದುವೆಯಾದ ಈ ಜೋಡಿ ಸುದೀರ್ಘ 26 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಜೀವನಾಂಶವಾಗಿ ಮೆಕೆಂಜಿ ಬೆಜೋಸ್ ಅವರು ವಿಚ್ಛೇದಿತ ಪತ್ನಿಗೆ ₹ 2.6 ಲಕ್ಷ ಕೋಟಿ (38 ಬಿಲಿಯನ್ ಡಾಲರ್​) ನೀಡಲಿದ್ದಾರೆ.

ಮೆಕೆಂಜಿ ಬೆಜೋಸ್

By

Published : Jul 2, 2019, 7:17 PM IST

ವಾಷಿಂಗ್ಟನ್​: ಇ- ಕಾಮರ್ಸ್ ದೈತ್ಯ ಅಮೆಜಾನ್​ ಸಂಸ್ಥಾಪಕ/ ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು ಪತ್ನಿ ಮೆಕೆಂಜಿ ಬೆಜೋಸ್ ಜೊತೆಗಿನ ದಾಂಪತ್ಯ ಜೀವನ ಕಡಿದುಕೊಂಡಿದ್ದಾರೆ.

ಜೆಫ್ ಬೆಜೋಸ್- ಮೆಕೆಂಜಿ ಬೆಜೋಸ್ ಅವರ ವಿಚ್ಛೇದನ ಜಗತ್ತಿನಲ್ಲಿ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರಲ್ಲಿ ಮದುವೆಯಾದ ಈ ಜೋಡಿ ಸುದೀರ್ಘ 26 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಜೀವನಾಂಶವಾಗಿ ಮೆಕೆಂಜಿ ಬೆಜೋಸ್ ಅವರು ವಿಚ್ಛೇದಿತ ಪತ್ನಿಗೆ ₹ 2.6 ಲಕ್ಷ ಕೋಟಿ ( 38 ಬಿಲಿಯನ್ ಡಾಲರ್​) ನೀಡಲಿದ್ದಾರೆ.

ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ವಿಚ್ಛೇದನ ಪಡೆದುಕೊಂಡ ಬಳಿಕ 49 ವರ್ಷದ ಮೆಕೆಂಜಿ ವಿಶ್ವದ 4ನೇ ಅತಿ ಶ್ರೀಮಂತ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ.

ಪರಿಹಾರದ ಮೊತ್ತದಲ್ಲಿ ಕನಿಷ್ಠ ಅರ್ಧದಷ್ಟು ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಮೆಕೆಂಜಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿದ ಜೆಫ್ ಬೆಜೋಸ್, 'ಮೆಕೆಂಜಿ ತನ್ನ ಪಾಲಿಗೆ ಬರಲಿರುವ ಮೊತ್ತವನ್ನು ಸಾಮಾಜ ಮುಖಿಯಂತಹ ಮಹತ್ವದ ಕಾರ್ಯಗಳಿಗೆ ವಿನಿಯೋಗಿಸುವುದು ಅರ್ಥಪೂರ್ಣ, ಪರಿಣಾಮಕಾರಿ ಹಾಗೂ ಅದ್ಭುತವಾಗಿದೆ. ನಾನು ಅವಳ ಬಗ್ಗೆ ಹೆಮ್ಮೆ ಪಡುತ್ತೇನೆ. ಅವಳ ಪತ್ರ ತುಂಬ ಚೆನ್ನಾಗಿದೆ' ಎಂದು ಶ್ಲಾಘಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details