ನವದೆಹಲಿ: ಲಾಕ್‌ಡೌನ್ ವಿಸ್ತರಣೆಗಳು ಆರ್ಥಿಕವಾಗಿ ಹಾನಿಕಾರಕ ಮಾತ್ರವಲ್ಲದೇ ಮತ್ತೊಂದು ವೈದ್ಯಕೀಯ ಬಿಕ್ಕಟ್ಟನ್ನು ಸೃಷ್ಟಿಸುತ್ತವೆ ಎಂದು ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಹೇಳಿದ್ದಾರೆ.
ನೀತಿ ನಿರೂಪಕರಿಗೆ ಆಯ್ಕೆಗಳು ಸುಲಭವಲ್ಲ ಎಂಬುದನ್ನು ಒಪ್ಪಿಕೊಂಡರೂ ಲಾಕ್‌ಡೌನ್ ವಿಸ್ತರಣೆಗಳು ನೆರವಾಗುವುದಿಲ್ಲ. ಲಾಕ್‌ಡೌನ್ ವಿಸ್ತರಣೆ ಆರ್ಥಿಕವಾಗಿ ಹಾನಿಕಾರಕವಲ್ಲದೇ ನಾನು ಮೊದಲೇ ಟ್ವೀಟ್ ಮಾಡಿದಂತೆ, ಅದು ಮತ್ತೊಂದು ವೈದ್ಯಕೀಯ ಬಿಕ್ಕಟ್ಟನ್ನು ಸಹ ಸೃಷ್ಟಿಸುತ್ತವೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
'ಲಾಕ್‌ಡೌನ್‌ಗಳ ಅಪಾಯಕಾರಿ ಮಾನಸಿಕ ಪರಿಣಾಮಗಳು ಮತ್ತು ಕೋವಿಡ್ ಅಲ್ಲದ ರೋಗಿಗಳನ್ನು ನಿರ್ಲಕ್ಷಿಸುವ ದೊಡ್ಡ ಅಪಾಯ' ಎಂಬ ಲೇಖನವನ್ನು ತಮ್ಮ ಟ್ವೀಟ್ಗೆ ಉಲ್ಲೇಖ ಮಾಡಿದ್ದಾರೆ.
ಈ ಹಿಂದೆ 49 ದಿನಗಳ ಲಾಕ್‌ಡೌನ್ ಬಳಿಕ ಸಂಪೂರ್ಣ ದಿಗ್ಬಂಧನ ತೆರವಿಗೆ ಪ್ರಸ್ತಾಪಿಸಿದ್ದ ಮಹೀಂದ್ರ, "ಆಯ್ಕೆಗಳು ನೀತಿ ನಿರೂಪಕರಿಗೆ ಸುಲಭವಲ್ಲ. ಆದರೆ, ಲಾಕ್‌ಡೌನ್ ವಿಸ್ತರಣೆಯು ಅವರಿಗೆ ಸಹಾಯ ಮಾಡುವುದಿಲ್ಲ" ಎಂದು ಹೇಳಿದ್ದರು.
ಸಂಖ್ಯೆಗಳು (ಕೊರೊನಾ ವೈರಸ್ ಪ್ರಕರಣಗಳು) ಹೆಚ್ಚಾಗುತ್ತಲೇ ಇರುತ್ತವೆ ಮತ್ತು ಆಸ್ಪತ್ರೆ ವಲಯದ ಆಮ್ಲಜನಕ ಹಾಗೂ ಹಾಸಿಗೆಗಳ ತ್ವರಿತ ವಿಸ್ತರಣೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.