'ವಾಟ್ಸ್ಆ್ಯಪ್'ಗೂ ಬಂತು 'ಫಿಂಗರ್ ಪ್ರಿಂಟ್ ಫೀಚರ್'; ಆ್ಯಪ್ ಲಾಕ್ ಮಾಡುವುದು ಹೀಗೆ.. - Facebook News
ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ ಫಿಂಗರ್ ಪ್ರಿಂಟ್ ಫೀಚರ್ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಸ್ಮಾರ್ಟ್ ಫೋನ್ಗಳಿಗೆ ಲಭ್ಯವಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ತನ್ನ ಬಿಟಾ ಪ್ರೋಗ್ರಾಮ್ ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯ್ಡ್ ಬಳಕೆದಾರರು ವಾಟ್ಸ್ಆ್ಯಪ್ 2.19.221ಗೆ ಅಪ್ಡೇಟ್ ಮಾಡುವ ಮೂಲಕ ನೂತನ ಫಿಂಗರ್ ಪ್ರಿಂಟ್ ಫೀಚರ್ ದೊರೆಯಲಿದೆ.
ನವದೆಹಲಿ:ಫೇಸ್ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಬಳಕೆದಾರರ ಸುರಕ್ಷತೆಗೆ ಫಿಂಗರ್ ಪ್ರಿಂಟ್ ಫೀಚರ್ ಪರಿಚಯಿಸಿದೆ.
ವಾಟ್ಸ್ಆ್ಯಪ್ ಬಿಡುಗಡೆ ಮಾಡಿದ ಫಿಂಗರ್ ಪ್ರಿಂಟ್ ಫೀಚರ್ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಸ್ಮಾರ್ಟ್ಫೋನ್ಗಳಿಗೆ ಲಭ್ಯವಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ತನ್ನ ಬಿಟಾ ಪ್ರೋಗ್ರಾಮ್ ಅಭಿವೃದ್ಧಿಪಡಿಸಿದೆ. ಆ್ಯಂಡ್ರಾಯ್ಡ್ ಬಳಕೆದಾರರು ವಾಟ್ಸ್ಆ್ಯಪ್ 2.19.221ಗೆ ಅಪ್ಡೇಟ್ ಮಾಡುವ ಮೂಲಕ ನೂತನ ಫಿಂಗರ್ ಪ್ರಿಂಟ್ ಫೀಚರ್ ದೊರೆಯಲಿದೆ.
ಹೈ ಎಂಡ್ ಶೈಲಿಯಲ್ಲಿ ಆ್ಯಪಲ್ ಐಫೋನ್ಗಳು ಟಚ್ ಐಡಿ, ಫೇಸ್ ಐಡಿ, ಪ್ಯಾಟರ್ನ್ ಲಾಕರ್ ಸೇರಿದಂತೆ ಕೆಲವು ಹೊಸ ಫೀಚರ್ಗಳನ್ನು ಹೊಂದಿವೆ. ಈ ನೂತನ ಫೀಚರ್ ವಿದೇಶಿಗರಿಗೆ ಲಭ್ಯವಾಗಿದ್ದು, ಶೀಘ್ರದಲ್ಲೇ ಭಾರತೀಯ ಬಳಕೆದಾರರಿಗೂ ಫಿಂಗರ್ ಪ್ರಿಂಟ್ ಲಭ್ಯವಾಗಲಿದೆ.
ಆ್ಯಂಡ್ರಾಯ್ಡ್ ವರ್ಷನ್ ಫಿಂಗರ್ ಪ್ರಿಂಟ್ ಲಾಕ್ ಫೀಚರ್
* ವಾಟ್ಸ್ಆ್ಯಪ್ 2.19.221ಗೆ ಅಪ್ಡೇಟ್ ವರ್ಷನ್ ಬಳಕೆದಾರರಿಗೆ ದೊರೆಯಲಿದೆ
* ಮೊದಲು ವಾಟ್ಸ್ ಆ್ಯಪ್ ಅನ್ನು 2.19.221ಗೆ ಮೇಲ್ದರ್ಜೆಗೆ ಏರಿಸಿ
* ಬಳಿಕ ವಾಟ್ಸ್ಆ್ಯಪ್ ತೆರೆದು ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಅಕೌಂಡ್ ಸೆಕ್ಷನ್ನಲ್ಲಿರುವ ಪ್ರೈವೆಸಿ ಸೆಟ್ಟಿಂಗ್ಸ್ ಆಯ್ಕೆ ತೆರೆಯಿರಿ
* ಬಳಿಕ ಆಯ್ಕೆಯಲ್ಲಿ ಕಾಣಿಸಿಕೊಳ್ಳುವ ಫಿಂಗರ್ ಪ್ರಿಂಟ್ ಆಯ್ಕೆಯನ್ನು ವಾಟ್ಸ್ಆ್ಯಪ್ಗೆ ಅಳವಡಿಸಿಕೊಳ್ಳಿ
ಐಒಎಸ್ ವರ್ಷನ್ ಫಿಂಗರ್ ಪ್ರಿಂಟ್ ಲಾಕ್ ಫೀಚರ್
* ವಾಟ್ಸ್ಆ್ಯಪ್ 2.19.20ಗೆ ಅಪ್ಡೇಟ್ ಮಾಡಿಕೊಳ್ಳಿ
* ನಿಮ್ಮ ಐಫೋನ್‌ನಲ್ಲಿನ ವಾಟ್ಸಾಪ್‌ನಲ್ಲಿರುವ 'ಸೆಟ್ಟಿಂಗ್ಸ್' ಟ್ಯಾಬ್‌ಗೆ ಹೋಗಿ ಗೌಪ್ಯತೆ ಆಯ್ಕೆ ಕ್ಲಿಕ್ ಮಾಡಿ
* ಸ್ಕ್ರೀನ್ ಲಾಕ್ ಅನ್ನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಟಾಗಲ್ ಅನ್ನು ಹೊಂದಿಸಿ
* ಟಾಗಲ್ ಹೊಂದಿಸಿದ ಬಳಿಕ ಐಫೋನ್‌ನಲ್ಲಿನ ಟಚ್ ಐಡಿ ವಾಟ್ಸ್ಆ್ಯಪ್ಗೆ ಸಕ್ರಿಯಗೊಂಡಿರುತ್ತಿದೆ
* ನಿಮ್ಮ ಫೇಸ್ ಐಡಿ ಹೊಂದಿಸಿ ಆ್ಯಪ್ಲಾಕ್ ಮಾಡಿಕೊಳ್ಳಬಹುದು