ನವದೆಹಲಿ: ಸ್ಥಿರ- ದೂರವಾಣಿ ಸೇವೆಗಳನ್ನು ಪ್ರಾರಂಭಿಸಲು ಯೋಚಿಸುತ್ತಿರುವ ಟೆಲಿಕಾಂ ಕಂಪೆನಿಗಳಿಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ನೆಟ್‌ವರ್ಕ್ ಪರೀಕ್ಷೆ ನಡೆಸಲು ಅವಕಾಶ ನೀಡಬಾರದು ಮತ್ತು ಪ್ರಾಯೋಗಿಕ ಅವಧಿಯಲ್ಲಿ ಅವರು ಬಳಕೆದಾರರಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಟ್ರಾಯ್, ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಿಲಯನ್ಸ್ ಜಿಯೋ ಚಂದಾದಾರರಿಂದ ಕೆಲವೊಂದು ದೂರುಗಳು ಬಂದ ಬಳಿಕ ಕೇಂದ್ರ ದೂರ ಸಂಪರ್ಕ ಇಲಾಖೆಗೆ ಟ್ರಾಯ್ ಸರಣಿ ಶಿಫಾರಸುಗಳನ್ನು ಮಾಡಿದೆ. ಈ ಹಿಂದೆ ದೂರ ಸಂಪರ್ಕ ಸೇವೆಗಳ ವಾಣಿಜ್ಯ ಸೇವೆ ಪ್ರಾರಂಭಕ್ಕೂ ಮೊದಲು ಕೆಲವೊಂದು ಮಾನದಂಡಗಳನ್ನು ಪಾಲಿಸುವಂತೆ ಟ್ರಾಯ್ ಶಿಫಾರಸು ಮಾಡಿತ್ತು. ಆದರೆ, 2019 ಜುಲೈನಲ್ಲಿ ವೈರ್ಲೆಸ್ ಸೇವೆಗಳ ಪ್ರಾಯೋಗಿಕ ಅವಧಿಗೆ ವಿಧಿಸಿದ್ದ ಮಾನದಂಡಗಳನ್ನು ದೂರ ಸಂಪರ್ಕ ಇಲಾಖೆ ತೆಗೆದು ಹಾಕಿತ್ತು.