ಕರ್ನಾಟಕ

karnataka

ETV Bharat / business

ಎಲ್​ಐಸಿಯಿಂದ 8,000 ಹುದ್ದೆಗಳಿಗೆ ನೇಮಕ: ಆಸಕ್ತರು ಅರ್ಜಿ ಸಲ್ಲಿಸಿ, ಇಲ್ಲಿದೆ ಮಾಹಿತಿ

ಭಾರತೀಯ ಜೀವ ವಿಮಾ ನಿಗಮವು (ಎಲ್​ಐಸಿ) 8,000 ಅಸಿಸ್ಟೆಂಟ್​ ಹುದ್ದೆಗಳ ನೇಮಕಾತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ₹ 14,435 ಮಾಸಿಕ ವೇತನದ ಹುದ್ದೆಗೆ ಸೆಪ್ಟೆಂಬರ್ 17 ರಿಂದ ಆನ್‌ಲೈನ್‌ ಮೂಲಕ​ ಅರ್ಜಿ ಸಲ್ಲಿಸಬಹುದು. ಪರೀಕ್ಷೆ ಆನ್​ಲೈನ್​ ಮೂಲಕ ನಡೆಯಲಿದ್ದು ತೇರ್ಗಡೆಯಾದವರನ್ನು ನೇರ ಸಂದರ್ಶನದ ಮುಖೇನ ನೇಮಕ ಮಾಡಿಕೊಳ್ಳಲಾಗುತ್ತದೆ.

ಸಾಂದರ್ಭಿಕ ಚಿತ್ರ

By

Published : Sep 17, 2019, 6:54 PM IST

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) 8,000 ಅಸಿಸ್ಟೆಂಟ್‌​ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 17ರಿಂದ ಆನ್​ಲೈನ್​ ಮುಖಾಂತರ ಪ್ರಕಟಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 1 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗೆ ttps://licindia.inಗೆ ಭೇಟಿ ನೀಡುವಂತೆ ಕೋರಿದೆ.

ಅರ್ಹತೆ:
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು.
ಸಂಬಳ:
ಮಾಸಿಕ ವೇತನ ₹ 14,435 ನಿಗದಿಪಡಿಸಲಾಗಿದೆ
ಪರೀಕ್ಷಾ ವಿಧಾನ:
ಬ್ಯಾಂಕ್​ ಮತ್ತು ಪಿಒ ಪರೀಕ್ಷೆಗಳಂತೆ ಎಲ್​ಐಸಿ ಪರೀಕ್ಷಾ ವಿಧಾನ ನಡೆಯಲಿದೆ

ಕೆಲ ಮಹತ್ವದ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ- ಸೆಪ್ಟೆಂಬರ್​ 17
ಅರ್ಜಿ ಸಲ್ಲಿಕೆಯ ಕೊನೆಯ ದಿನ- ಅಕ್ಟೋಬರ್ 1
ಮುದ್ರಿತ​ ಅರ್ಜಿ ಸಲ್ಲಿಸುವ ಕೊನೆಯ ದಿನ- 22 ಅಕ್ಟೋಬರ್​

ಆಯ್ಕೆ ವಿಧಾನ:
ಪ್ರೈಮರಿ ಆನ್‌ಲೈನ್ ಪರೀಕ್ಷೆ ಮತ್ತು ಮುಖ್ಯ ಆನ್‌ಲೈನ್ ಪರೀಕ್ಷೆಯಲ್ಲಿ ಅಭ್ಯರ್ಥಿ ಜ್ಯೇಷ್ಠತೆ ಆಧರಿಸಿ ನೇಮಕಾತಿ ನಡೆಯಲಿದೆ. ನಂತರ ನೇರ ಸಂದರ್ಶನ ನಡೆಯಲಿದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ತಾಳೆ ಹಾಕಿ ಅಂತಿಮ ನೇಮಕಾತಿ ನಡೆಯಲಿದೆ.

ABOUT THE AUTHOR

...view details