ಸಿಯೋಲ್ :ಸಾರಿಗೆ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿಕೊಳ್ಳಲು ದಕ್ಷಿಣ ಕೊರಿಯಾದ ಟೆಕ್ ದೈತ್ಯ ಎಲ್ಜಿ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಪರಿಚಯಿಸಿದೆ.
ಸ್ಥಳೀಯ ಎಲೆಕ್ಟ್ರಿಕ್ ಸ್ಕೂಟರ್ ಹಂಚಿಕೆ ಸೇವಾ ಪೂರೈಕೆದಾರ ಕಿಕ್‌ಗೋಯಿಂಗ್ ಅವರ ಸಹಭಾಗಿತ್ವದಲ್ಲಿ ಸಿಯೋಲ್‌ನ ಪಶ್ಚಿಮದಲ್ಲಿ ಇರುವ ಬುಚಿಯಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವೈರ್‌ಲೆಸ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಎಲ್ಜಿ ಹೇಳಿದೆ.
ಸಿಯೋಲ್ ಮತ್ತು ಇತರ ಪ್ರದೇಶಗಳನ್ನು ವಿಸ್ತರಿಸಲು ಮುಂದಿನ ಆರು ತಿಂಗಳವರೆಗೆ ಎಲೆಕ್ಟ್ರಿಕ್ ಸ್ಕೂಟರ್ ವೈರ್‌ಲೆಸ್ ಚಾರ್ಜಿಂಗ್ ಉಪಯುಕ್ತತೆ ಮತ್ತು ಸುರಕ್ಷತೆಯನ್ನು ಎರಡೂ ಸಂಸ್ಥೆಗಳು ಪರಿಶೀಲಿಸುತ್ತಾರೆ.
ಬುಚಿಯಾನ್‌ನ ಐದು ಪಾರ್ಕಿಂಗ್ ವಲಯಗಳಲ್ಲಿ ಪ್ರಸ್ತುತ 20 ವೈರ್‌ಲೆಸ್ ಚಾರ್ಜಿಂಗ್ 'ಕಿಕ್ ಸ್ಪಾಟ್‌ಗಳು' ಲಭ್ಯವಿದ್ದು, ಅವುಗಳನ್ನು ವೈರ್‌ಲೆಸ್ ಚಾರ್ಜಿಂಗ್ ರಿಸೀವರ್ ಪ್ಯಾಡ್‌ಗಳೊಂದಿಗೆ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.