ನವದೆಹಲಿ:ದಕ್ಷಿಣ ಕೊರಿಯಾ ಮೂಲದ ಎಲ್ಜಿ ಕಂಪನಿಯು ಭಾರತೀಯ ಮಾರುಕಟ್ಟೆಗೆ 'W' ಶ್ರೇಣಿಯ ಮೂರು ಸ್ಮಾರ್ಟ್ ಫೋನ್ಗಳನ್ನು ಶೀಘ್ರವೇ ಪರಿಚಯಿಸಲಿದೆ.
'W' ಶ್ರೇಣಿಯಲ್ಲಿ ಮುಂಚೂಣಿಯಲ್ಲಿರುವ 'ಎಲ್ಜಿ ಡಬ್ಲ್ಯು30', 'ಎಲ್ಜಿ ಡಬ್ಲ್ಯು30 ಪ್ರೋ' ಹಾಗೂ 'ಎಲ್ಜಿ ಡಬ್ಲ್ಯು10' ಮೊಬೈಲ್ಗಳು ಬಿಡುಗಡೆ ಆಗಲಿವೆ. 'ಎಲ್ಜಿ ಡಬ್ಲ್ಯು10' ಬೆಲೆ ₹ 8,999 ಇದ್ದರೆ, 'ಎಲ್ಜಿ ಡಬ್ಲ್ಯು30' ₹ 9,999 ಇರಲಿದೆ. ಡಬ್ಲ್ಯು30 ಪ್ರೋ ಬೆಲೆಯನ್ನು ಶೀಘ್ರದಲ್ಲೇ ನಿರ್ಧರಿಸಿ ತಿಳಿಸಲಾಗುವುದು ಎಂದು ಭಾರತ ವ್ಯಾಪ್ತಿಯ ಎಲೆಕ್ಟ್ರಾನಿಕ್ ವಿಭಾಗದ ವ್ಯವಸ್ಥಾಪಕ ಕಿ ವಾನ್ ಕಿಮ್ ಹೇಳಿದ್ದಾರೆ.
ಇಂದು ನಮಗೆ ಅತ್ಯಂತ ಮಹತ್ವದ ದಿನ. ಎಲ್ಜಿ ತನ್ನ ಮೂರು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಲ್ಲಿನ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಉತ್ಪನ್ನಗಳನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.