ಕರ್ನಾಟಕ

karnataka

ETV Bharat / business

ಲೆನೋವೋ 25ಪಿ ಕ್ಯಾಮೆರಾ+ಸ್ಮಾರ್ಟ್​ ವಾಚ್ ಲೋಕಾರ್ಪಣೆ​, ಬೆಲೆಯೆಷ್ಟು? - Flipkart News

ಆಕರ್ಷಕ ಕಪ್ಪು ಮತ್ತು ಹಸಿರು ಬಣ್ಣದ ಸ್ಮಾರ್ಟ್​ ವಾಚ್ ಸೆಪ್ಟೆಂಬರ್​ 15ರಿಂದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ದೊರೆಯಲಿದ್ದು, ಪ್ರತಿ ವಾಚ್​ನ ಬೆಲೆ ₹ 3,499 ನಿಗದಿಪಡಿಸಲಾಗಿದೆ.

ಲೆನೋವೋ

By

Published : Sep 14, 2019, 8:49 PM IST

ನವದೆಹಲಿ:ಚೀನಾ ಮೂಲದ ತಂತ್ರಜ್ಞಾನ ದೈತ್ಯ ಲೆನೋವೋ ಕಂಪನಿ ಭಾರತೀಯ ಮಾರುಕಟ್ಟೆಗೆ ನೂತನ ಶೈಲಿಯ ಸ್ಮಾರ್ಟ್​ ಕೈ ಗಡಿಯಾರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಎಚ್​ಡಬ್ಲ್ಯು 25ಪಿ ಸಾಮರ್ಥ್ಯದ ಕ್ಯಾಮೆರ್​ ಫೀಚರ್​ ಹೊಂದಿದೆ.

ಆಕರ್ಷಣಿಯ ಕಪ್ಪು ಮತ್ತು ಹಸಿರು ಬಣ್ಣದ ಸ್ಮಾರ್ಟ್‌ವಾಚ್ ಸೆಪ್ಟೆಂಬರ್​ 15ರಿಂದ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ದೊರೆಯಲಿದ್ದು, ಪ್ರತಿ ವಾಚ್​ನ ಬೆಲೆಯನ್ನು ₹ 3,499 ನಿಗದಿಪಡಿಸಲಾಗಿದೆ.

1.3 ಇಂಚಿನ ಐಪಿಎಸ್ ವರ್ಣರಂಜಿತ ಡಿಸ್​ಪ್ಲೇ ಜೊತೆಗೆ 2.5 ಡಿ ಬಾಗಿದ ಮೇಲ್ಮೈ ವಿನ್ಯಾಸ ಹೊಂದಿದೆ. ಐಪಿ 68 ರೇಟ್ ಹೊಂದಿದ್ದು, ನೀರು ಮತ್ತು ಧೂಳು ನಿರೋಧಕವಾಗಿದೆ. ಬಳಕೆದಾರರ ನಿದ್ರೆ ಮತ್ತು ದೈನಂದಿನ ಚಟುವಟಿಕೆಯನ್ನು ಸಹ ಟ್ರ್ಯಾಕ್ ಮಾಡಲಿದೆ.

ಒಂದು ಬಾರಿ ಚಾರ್ಜ್‌ ಮಾಡಿದರೆ 7 ದಿನಗಳವರೆಗೆ ಬ್ಯಾಟರಿ ಬಾಳ್ವಿಕೆ ಬರಲಿದೆ. ಸ್ಪೋರ್ಟ್ಸ್ ಮೋಡ್ ಸಹ ಹೊಂದಿದ್ದು ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್, ಈಜು, ವಾಕಿಂಗ್, ರನ್ನಿಂಗ್​, ಸೈಕ್ಲಿಂಗ್ ಸೇರಿದಂತೆ ಇತರೆ ಕ್ರೀಡೆಗಳಲ್ಲೂ ಧರಿಸಬಹುದು.

ABOUT THE AUTHOR

...view details