ನವದೆಹಲಿ: ಬೆಂಗಳೂರು ಮೂಲದ ಐಟಿ ಕಂಪನಿ ಮೈಂಡ್ ಟ್ರೀ ಖರೀದಿಸುವ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್‌ಆ್ಯಂಡ್‌ಟಿ) ಪ್ರಯತ್ನಕ್ಕೆ ಕಾಂಪಿಟೇಷನ್ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನುಮೋದಿಸಿದೆ.
ಮೈಂಡ್ ಟ್ರೀ ಸ್ವಾಧೀನಕ್ಕೆ ಸಿಪಿಐ ಗ್ರೀನ್ ಸಿಗ್ನಲ್...
ಐಟಿ ಕಂಪನಿ ಮೈಂಡ್ ಟ್ರೀ ಖರೀದಿಸುವ ಲಾರ್ಸನ್ ಆ್ಯಂಡ್ ಟೂಬ್ರೊ ಪ್ರಯತ್ನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಹಸಿರು ನಿಶಾನೆ ತೋರಿದೆ. ಎಲ್‌ಆ್ಯಂಡ್‌ಟಿ ಶೇ 66.15ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದೆ.
ಲಾರ್ಸನ್ ಆ್ಯಂಡ್ ಟೂಬ್ರೊ ಕಂಪನಿಯು ಮೈಂಡ್ ಟ್ರೀ ಕಂಪನಿಯ ಶೇ.66.15ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದೆ. ಈ ಪ್ರಯತ್ನವನ್ನು ಮೈಂಡ್ ಟ್ರೀ ಕಂಪನಿಯ ಸ್ಥಾಪಕರು ಬಹಿರಂಗವಾಗಿಯೇ ವಿರೋಧಿಸಿದ್ದರು. ಮೈಂಡ್ ಟ್ರೀಯ ಹೂಡಿಕೆದಾರ, ಕೆಫೆ ಕಾಫಿ ಡೇಯ ಪ್ರವರ್ತಕರಾದ ವಿಜಿ ಸಿದ್ಧಾರ್ಥ ಅವರು ಮೈಂಡ್ ಟ್ರೀಯಲ್ಲಿನ ಶೇ.20.32 ಷೇರುಗಳನ್ನು 3,269 ಕೋಟಿ ರೂ.ಗೆ ಮಾರಲು ಮುಂದಾದ ನಂತರ, ಎಲ್‌ಆ್ಯಂಡ್‌ಟಿ ಇಡೀ ಕಂಪನಿಯನ್ನೇ ಖರೀದಿಸಲು ಉತ್ಸುಕವಾಗಿತ್ತು.
ಐಟಿ ಕಂಪನಿ ಮೈಂಡ್ ಟ್ರೀ ಖರೀದಿಸುವ ಲಾರ್ಸನ್ ಆ್ಯಂಡ್ ಟೂಬ್ರೊ ಪ್ರಯತ್ನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಹಸಿರು ನಿಶಾನೆ ತೋರಿದೆ. ಎಲ್‌ಆ್ಯಂಡ್‌ಟಿ ಶೇ 66.15ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದೆ.