ನವದೆಹಲಿ:ನಿರ್ಮಾಣ ವಲಯದ ದೈತ್ಯ ಎಲ್ ಆ್ಯಂಡ್ ಟಿ ಕಂಪನಿಯು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ಗುತ್ತಿಗೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ನವಿ ಮುಂಬೈ ವಿಮಾನ ನಿಲ್ದಾಣ ಕಾಮಗಾರಿ ಎಲ್ ಆ್ಯಂಡ್ ಟಿ ಪಾಲು
ನವಿ ಮುಂಬೈ ಇಂಟರ್ನ್ಯಾಷನಲ್ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ನಿಂದ (ಎನ್‌ಎಂಐಎಪಿಎಲ್) ಪ್ರತಿಷ್ಠಿತ ಯೋಜನೆಯನ್ನು ಎಲ್ ಆ್ಯಂಡ್ ಟಿಯ ಸಾರಿಗೆ, ಮೂಲಸೌಕರ್ಯ ಮತ್ತು ಕಟ್ಟಡ ಹಾಗೂ ಕಾರ್ಖಾನೆಗಳ ನಿರ್ಮಾಣ ವ್ಯವಹಾರಗಳ ವಿಭಾಗ ಪಡೆದುಕೊಂಡಿದೆ ಎಂದು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.
ಕಂಪನಿಯು ತನ್ನ ಯೋಜನಾ ಕಾಮಗಾರಿಯ ಗುತ್ತಿಗೆ ಮೊತ್ತವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಆಗಿದ್ದರಿಂದ ಯೋಜನಾ ಗಾತ್ರವು ದೊಡ್ಡದಾಗಿಯೇ ಇರಲಿದ್ದು, ಕಾಮಗಾರಿಯ ಮೊತ್ತ ಅಂದಾಜು ₹ 5,000 ಮತ್ತು ₹ 7,000 ಕೋಟಿ ಅಂತರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.