ಕರ್ನಾಟಕ

karnataka

ETV Bharat / business

'ಕೈ'​ ಆಡಳಿತದ ರಾಜ್ಯದಲ್ಲಿ 100 ಹೈಟೆಕ್​ 'ಗೋಶಾಲೆ' ನಿರ್ಮಿಸಲಿದೆ ಬಿರ್ಲಾ ಕಂಪನಿ..! - Kumar Mangalam Birla

ಮುಂಬೈ ಪ್ರವಾಸದ ವೇಳೆ ಸಿಎಂ ಕಮಲ್​​ನಾಥ್​​ ಅವರು ಉದ್ಯಮ ಕುಮಾರ ಮಂಗಲಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಮಧ್ಯಪ್ರದೇಶದಲ್ಲಿ 100 ಹೈಟೆಕ್​ ಗೋಶಾಲೆಗಳನ್ನು ನಿರ್ಮಿಸುವ ಹೂಡಿಕೆಯ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

By

Published : Aug 10, 2019, 7:39 PM IST

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಎರಡು ದಿನ ಮುಂಬೈ ಪ್ರವಾಸ ಕೈಗೊಂಡು ಹಲವು ಹೂಡಿಕೆಗಳ ಪ್ರಸ್ತಾವನೆಯೊಂದಿಗೆ ತವರಿಗೆ ಮರಳಿದ್ದಾರೆ.

ಮುಂಬೈ ಪ್ರವಾಸದ ವೇಳೆ ಸಿಎಂ ಕಮಲ್​ ನಾಥ್​ ಅವರು ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಮಧ್ಯಪ್ರದೇಶದಲ್ಲಿ 100 ಹೈಟೆಕ್​ ಗೋಶಾಲೆಗಳನ್ನು ನಿರ್ಮಿಸುವ ಹೂಡಿಕೆಯ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರ್ ಮಂಗಲಂ ಬಿರ್ಲಾ ಅವರು ಮುಂದಿನ 18 ತಿಂಗಳಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಿಂದ ರಾಜ್ಯದಲ್ಲಿ 100 ಹೈಟೆಕ್ ಗೋಶಾಲೆಗಳನ್ನು ನಿರ್ಮಿಸಿಕೊಡಲು ಒಪ್ಪಿಕೊಂಡಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರದ ಹಸು ಕಲ್ಯಾಣದ ಕಾರ್ಯಸೂಚಿಯಲ್ಲಿ ಬಿಡಾಡಿ ದನಗಳಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಸಾರ್ವಜನಿಕರಿಗೆ ಆದೇಶಿಸಿತ್ತು. ಬಿಜೆಪಿಯ ಹಿಂದುತ್ವಕ್ಕೆ ಪ್ರತಿಯಾಗಿ ಕಾಂಗ್ರೆಸ್​, ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಹಸುಗಳ ಸಂರಕ್ಷಣೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಕಳೆದ ಜನವರಿಯಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ 1,000 ಗೋಶಾಲೆ ನಿರ್ಮಿಸುವುದಾಗಿ ಹೇಳಿತ್ತು. ಆದರೆ, ಯೋಜನೆ ಜಾರಿಗೆ ವಿಳಂಬವಾಗಿತ್ತು. ಇದು ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿತು.

ಕಮಲ್​ ನಾಥ್ ಅವರ ಮಹತ್ವದ ಯೋಜನೆಗೆ ಕಾರ್ಪೊರೇಟ್​ ಶಕ್ತಿಗಳು ಕೈಜೋಡಿಸಿದ್ದು, ಮುಂದಿನ ಐದು ವರ್ಷಗಳಲ್ಲಿ 300 'ಸ್ಮಾರ್ಟ್' ಗೋಶಾಲೆಗಳನ್ನು ನಿರ್ಮಿಸುವ ಕುರಿತು ರಾಜ್ಯ ಸರ್ಕಾರ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಸಹಿ ಹಾಕಿದೆ ಎಂದು ಪಶುಸಂಗೋಪನಾ ಇಲಾಖೆಯ ಮೂಲಗಳು ತಿಳಿಸಿವೆ.

ABOUT THE AUTHOR

...view details