ಕರ್ನಾಟಕ

karnataka

ETV Bharat / business

ಗುಡ್​​ ನ್ಯೂಸ್​: ಕಾರ್ಡ್​ ಬಳಸದೆ ATMನಿಂದ ಹಣ ಡ್ರಾ ಮಾಡಿ- ಹೇಗೆ ಗೊತ್ತಾ? - ಎಟಿಎಂ

ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನೊಂದಿಗೆ ಬಳಸಿ, ಕೋಟಕ್​ ಬ್ಯಾಂಕ್​ ಗ್ರಾಹಕರು ಕೋಟಕ್ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಫ್ಲಾ ಟ್‌ಫಾರ್ಮ್ ಮೂಲಕ ವಹಿವಾಟು ಪ್ರಾರಂಭಿಸಬಹುದು. ಫಲಾನುಭವಿಯು ಕೋಟಕ್ ಗ್ರಾಹಕ ಆಗಿಲ್ಲದಿದ್ದರೂ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೂ ಯಾವುದೇ ಕೋಟಕ್ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ATMs
ಎಟಿಎಂ

By

Published : Aug 24, 2020, 6:02 PM IST

ನವದೆಹಲಿ: ಕೋವಿಡ್ -19 ಅವಧಿಯಲ್ಲಿ ಮತ್ತೊಂದು ಆವಿಷ್ಕಾರಕ್ಕೆ ಮುಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ (ಕೊಟಕ್) ಸೋಮವಾರದಿಂದ ಎಟಿಎಂಗಳ ಮೂಲಕ ಕಾರ್ಡ್‌ಲೆಸ್ ನಗದು ಹಿಂತೆಗೆದುಕೊಳ್ಳುವ ಸೌಲಭ್ಯ ಪರಿಚಯಿಸಿದೆ.

ಅನನ್ಯ ಸೌಲಭ್ಯದಡಿಯಲ್ಲಿ ಕೋಟಾಕ್ ಬ್ಯಾಂಕ್​ ಖಾತೆದಾರರು ಡೆಬಿಟ್ ಕಾರ್ಡ್ ಬಳಸದೆ ನಗದು ಹಿಂಪಡೆಯುವಿಕೆ ಮಾಡುವುದರ ಜೊತೆಗೆ ಭಾರತದಾದ್ಯಂತದ ಫಲಾನುಭವಿಗಳಿಗೆ ಹಣ ರವಾನಿಸಬಹುದು ಎಂದು ಹೇಳಿದೆ.

ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನೊಂದಿಗೆ ಬಳಸಿ, ಕೋಟಕ್​ ಬ್ಯಾಂಕ್​ ಗ್ರಾಹಕರು ಕೋಟಕ್ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಹಿವಾಟು ಪ್ರಾರಂಭಿಸಬಹುದು. ಫಲಾನುಭವಿಯು ಕೋಟಕ್ ಗ್ರಾಹಕ ಆಗಿಲ್ಲದಿದ್ದರೂ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೂ ಯಾವುದೇ ಕೋಟಕ್ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ಹಣವನ್ನು ಹಿಂಪಡೆಯಲು ನೋಂದಾಯಿತ ಫಲಾನುಭವಿಯು ಮೊಬೈಲ್ ಸಂಖ್ಯೆ ನಮೂದಿಸಬೇಕು. ಒಟಿಪಿ ಮತ್ತು ನಿಖರವಾದ ನಗದು ಮೊತ್ತ ದಾಖಲಿಸಬೇಕು. ತಕ್ಷಣವೇ ಎಟಿಎಂನಿಂದ ಹಣ ಹೊರ ಬರುತ್ತದೆ. ಇದೇ ರೀತಿಯ ವೈಶಿಷ್ಟ್ಯವನ್ನು ಬಳಸಿಕೊಂಡು ಹಣ ಹಿಂಪಡೆಯಬಹುದು.

ಡಿಜಿಟಲ್ ಬ್ಯಾಂಕ್​ ಸೌಲಭ್ಯವನ್ನು ಕೋಟಕ್​ ಬ್ಯಾಂಕ್​ ಗ್ರಾಹಕರಿಗೆ ನೀಡಲಾಗುತ್ತಿದೆ. ಕಾರ್ಡ್‌ಲೆಸ್ ನಗದು ಹಿಂತೆಗೆದುಕೊಳ್ಳುವ ಸೌಲಭ್ಯವು ಸರಳ, ಸುರಕ್ಷಿತ ಮತ್ತು ಬಳಕೆದಾರರ ಸ್ನೇಹಿಯಾಗಿದೆ. ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಸದಾ ತಮ್ಮೊಂದಿಗೆ ಕೊಂಡೊಯ್ಯುವುದನ್ನು ತಪ್ಪಿಸಲಿದೆ.

ಭಾರತದಲ್ಲಿ ನಗದು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಸೌಲಭ್ಯವು ನಮ್ಮ ಗ್ರಾಹಕರಿಗೆ ಸ್ನೇಹಪರವಾಗಿ ಇರಲಿದೆ. ಕುಟುಂಬ ಸದಸ್ಯರಿಗೆ ಮತ್ತು ಇತರ ಫಲಾನುಭವಿಗಳಿಗೆ ತಮ್ಮ ಇಚ್ಛೆಯಂತೆ ಹಣ ರವಾನಿಸಲು ಅನುವು ಮಾಡಿಕೊಡುತ್ತದೆ ಎಂದು ಗ್ರಾಹಕ ವಿಭಾಗದ ಅಧ್ಯಕ್ಷ ಪುನೀತ್ ಕಪೂರ್ ಹೇಳಿದರು.

ABOUT THE AUTHOR

...view details