ಕರ್ನಾಟಕ

karnataka

ETV Bharat / business

ಸತತ 6ನೇ ಬಾರಿ ಜಗತ್ತಿನ ಮೆಡಿಸಿನ್ ಮೇಕರ್ ಪವರ್ ಪಟ್ಟಿಯಲ್ಲಿ ಕಿರಣ್ ಮಜುಂದಾರ್ ಶಾ - ಬಯೋಕಾನ್ ಲಿಮಿಟೆಡ್​

'2020ರ ಮೆಡಿಸಿನ್ ಮೇಕರ್ ಪವರ್ ಲಿಸ್ಟ್ 20' ಅಡಿ, ಸಣ್ಣ ಅಣು (ಸ್ಮಾಲ್ ಮಾಲಿಕ್ಯೂಲ್​), ಜೈವಿಕ ಔಷಧಗಳು ಮತ್ತು ಸುಧಾರಿತ ಔಷಧಗಳಲ್ಲಿ ಹೊಸತನ ತಂದ ಜಾಗತಿಕವಾಗಿ 60 ಸಾಧಕರನ್ನು ಗುರುತಿಸಲಾಗಿದೆ. ಇದರಲ್ಲಿ ಕಿರನ್ ಮಜುಂದಾರ್ ಶಾ ಅಗ್ರ 20ನೇ ಸ್ಥಾನ ಪಡೆದಿದ್ದಾರೆ.

Kiran Mazumdar Shaw
ಕಿರಣ್ ಮಜುಂದಾರ್ ಶಾ

By

Published : Apr 28, 2020, 12:01 AM IST

ಬೆಂಗಳೂರು: 'ಮೆಡಿಸಿನ್ ಮೇಕರ್ ಪವರ್ ಲಿಸ್ಟ್ 2020'ರ ಪಟ್ಟಿಯಲ್ಲಿ ಬೆಂಗಳೂರಿನ ಬಯೋಕಾನ್ ಲಿಮಿಟೆಡ್​ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ವಿಶ್ವದ ಅಗ್ರ 20 ಸ್ಪೂರ್ತಿದಾಯಕ ನಾಯಕರಲ್ಲಿ ಸ್ಥಾನ ಪಡೆದಿದ್ದಾರೆ.

ಜಾಗತಿಕ ಉದ್ಯಮ ಮತ್ತು ನವೀನ ವ್ಯಾಪಾರ ನಾಯಕತ್ವದ ಔಷಧ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಶಾ ಅವರಿಗೆ ಈ ಗೌರವ ಲಭಿಸಿದೆ.

'2020ರ ಮೆಡಿಸಿನ್ ಮೇಕರ್ ಪವರ್ ಲಿಸ್ಟ್ 20' ಅಡಿ, ಸಣ್ಣ ಅಣು (ಸ್ಮಾಲ್ ಮಾಲಿಕ್ಯೂಲ್​), ಜೈವಿಕ ಔಷಧಗಳು ಮತ್ತು ಸುಧಾರಿತ ಔಷಧಗಳಲ್ಲಿ ಹೊಸತನ ತಂದ ಜಾಗತಿಕವಾಗಿ 60 ಸಾಧಕರನ್ನು ಗುರುತಿಸಲಾಗಿದೆ. ಇದರಲ್ಲಿ ಕಿರನ್ ಮಜುಂದಾರ್ ಶಾ ಅಗ್ರ 20ನೇ ಸ್ಥಾನ ಪಡೆದಿದ್ದಾರೆ.

ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಕೋವಿಡ್ -19 ಲಸಿಕೆಗಳು ಹಾಗೂ ಚಿಕಿತ್ಸೆಯನ್ನು ಆದಷ್ಟು ಬೇಗ ಮಾರುಕಟ್ಟೆಗೆ ತರುವಲ್ಲಿ ಸಹಾಯ ಹಸ್ತ ನೀಡಿ, ಉದ್ಯಮವನ್ನು ಮುಂದಕ್ಕೆ ಸಾಗಿಸುವ ಹಾಗೂ ಜೀವ ಉಳಿಸುವ ವೃತ್ತಿಪರರು ಒಳಗೊಂಡಂತೆ ತೋರುತ್ತಿದೆ. ಮಜುಂದಾರ್-ಶಾ ಅವರು 2015ರಿಂದ ಸತತ ಆರು ವರ್ಷಗಳಿಂದ ಮೆಡಿಸಿನ್ ಮೇಕರ್ ಪವರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details