ಕರ್ನಾಟಕ

karnataka

ETV Bharat / business

ಹಾದಿ ತಪ್ಪಿದ ರಾಜ್ಯ ಸಾರಿಗೆ ನಿಗಮಗಳ ಆದಾಯ: 2 ವರ್ಷಗಳ ಆರ್ಥಿಕ ಸ್ಥಿತಿಗತಿ ಹೀಗಿದೆ! - Karnataka's four state road transport corporations

ನಷ್ಟದಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ಅವರ ಬೇಡಿಕೆಯಂತೆ ವೇತನ ನೀಡಿದರೆ ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆ ಬೀಳಲಿದೆ. ಮುಷ್ಕರದ ಈ ಸಂದರ್ಭ ಸಾರಿಗೆ ಇಲಾಖೆ ನೀಡಿರುವ ಅಂಕಿಅಂಶದಂತೆ ಎರಡು ವರ್ಷದಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ, ವೆಚ್ಚ ಮತ್ತು ನಷ್ಟ ಪ್ರಮಾಣದ ಸಮಗ್ರ ಚಿತ್ರಣ ಇಲ್ಲಿದೆ.

Karnataka road transport

By

Published : Apr 10, 2021, 5:29 AM IST

ಬೆಂಗಳೂರು:ಸಾರಿಗೆ ನಿಗಮದ ನೌಕರರು 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವಂತೆ ಆಗ್ರಹಿಸಿ ಮುಷ್ಕರದ ಹಾದಿ ಹಿಡಿದಿದ್ದಾರೆ. ಇತ್ತ ಸರ್ಕಾರ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ ಇಲ್ಲ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ನಷ್ಟದ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

ಸತತ 4ನೇ ದಿನ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಆರನೇ ವೇತನ ಆಯೋಗದಡಿ ನಮಗೆ ವೇತನ ಕೊಡಲೇಬೇಕು ಎಂದು‌ ಪಟ್ಟು ಹಿಡಿದಿದ್ದಾರೆ. ನಷ್ಟದಲ್ಲಿ ಸಾಗುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ಅವರ ಬೇಡಿಕೆಯಂತೆ ವೇತನ ನೀಡಿದರೆ ಸರ್ಕಾರಕ್ಕೆ ದೊಡ್ಡ ಆರ್ಥಿಕ ಹೊರೆ ಬೀಳಲಿದೆ. ಮುಷ್ಕರದ ಈ ಸಂದರ್ಭ ಸಾರಿಗೆ ಇಲಾಖೆ ನೀಡಿರುವ ಅಂಕಿಅಂಶದಂತೆ ಎರಡು ವರ್ಷದಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ, ವೆಚ್ಚ ಮತ್ತು ನಷ್ಟ ಪ್ರಮಾಣದ ಸಮಗ್ರ ಚಿತ್ರಣ ಇಲ್ಲಿದೆ.

2019-20ರ ವೆಚ್ಚ ನಷ್ಟದ ಪ್ರಮಾಣ:

2019-20ರಲ್ಲಿ ನಾಲ್ಕು ಸಾರಿಗೆ ನಿಗಮಗಳು ಬರೋಬ್ಬರಿ 982.63 ಕೋಟಿ ರೂ. ನಷ್ಟ ಅನುಭವಿಸಿದವು. ನಾಲ್ಕು ನಿಗಮಗಳಿಗೆ ಬಂದ ಆದಾಯ 9,703.57 ಕೋಟಿ ರೂ.ಯಷ್ಟಿದೆ. ಈ ಪೈಕಿ 1,017 ಕೋಟಿ ರೂ. ಸರ್ಕಾರದಿಂದ ಸಹಾಯಧನ ಪಡೆಯಲಾಗಿದೆ. ಆದರೆ, ಆಗಿರುವ ಒಟ್ಟು ವೆಚ್ಚ 10,686.20 ಕೋಟಿ ರೂ.ಯಷ್ಟಿದೆ. ಆ ಮೂಲಕ 982.63 ಕೋಟಿ ನಷ್ಟ ಅನುಭವಿಸಿದೆ. 2019-20ರಲ್ಲಿ ಇಂಧನ ವೆಚ್ಚ 3464.86 ಕೋಟಿ ರೂ. ಹಾಗೂ ಸಿಬ್ಬಂದಿ ವೆಚ್ಚ 5071.68 ಕೋಟಿ ರೂ.ಯಷ್ಟಿದೆ.

ಕೆಎಸ್ಆರ್​​ಟಿಸಿ:
ಒಟ್ಟು ವೆಚ್ಚ- 3948.56 ಕೋಟಿ ರೂ.
ಒಟ್ಟು ಆದಾಯ- 3791 ಕೋಟಿ ರೂ.
ನಷ್ಟ- 157.56 ಕೋಟಿ ರೂ.
ಇಂಧನ ವೆಚ್ಚ- 1401.24ಕೋಟಿ
ಸಿಬ್ಬಂದಿ ವೆಚ್ಚ- 1673.36 ಕೋಟಿ
ಬಿಎಂಟಿಸಿ:
ಒಟ್ಟು ವೆಚ್ಚ- 2669.31 ಕೋಟಿ ರೂ.
ಒಟ್ಟು ಆದಾಯ- 2119.97 ಕೋಟಿ ರೂ.
ನಷ್ಟ- 549.34 ಕೋಟಿ ರೂ.
ಇಂಧನ ವೆಚ್ಚ- 705.81 ಕೋಟಿ ರೂ.
ಸಿಬ್ಬಂದಿ ವೆಚ್ಚ- 1464.64 ಕೋಟಿ ರೂ.
ಎನ್​ಡಬ್ಲ್ಯುಆರ್​ಟಿಸಿ:
ಒಟ್ಟು ವೆಚ್ಚ- 2141.87 ಕೋಟಿ ರೂ.
ಒಟ್ಟು ಆದಾಯ- 1955.41 ಕೋಟಿ ರೂ.
ನಷ್ಟ- 186.46 ಕೋಟಿ ರೂ.
ಇಂಧನ ವೆಚ್ಚ- 731 ಕೋಟಿ ರೂ.
ಸಿಬ್ಬಂದಿ ವೆಚ್ಚ- 1009 ಕೋಟಿ ರೂ.
ಎನ್ಈಆರ್​ಟಿಸಿ:
ಒಟ್ಟು ವೆಚ್ಚ- 1926.46 ಕೋಟಿ ರೂ.
ಒಟ್ಟು ಆದಾಯ- 1837 ಕೋಟಿ ರೂ.
ನಷ್ಟ- 89.27 ಕೋಟಿ ರೂ.
ಇಂಧನ ವೆಚ್ಚ- 626.74 ಕೋಟಿ ರೂ.
ಸಿಬ್ಬಂದಿ ವೆಚ್ಚ- 924.61ಕೋಟಿ ರೂ.
2020-21ರ ವೆಚ್ಚ, ನಷ್ಟದ ಪ್ರಮಾಣ:
2020-21ರಲ್ಲಿ ನಾಲ್ಕು ಸಾರಿಗೆ ನಿಗಮಗಳ ನಷ್ಟದ ಪ್ರಮಾಣದಲ್ಲಿ ಇನ್ನಷ್ಟು ಏರಿಕೆಯಾಗಿದೆ. ಬರೋಬ್ಬರಿ 1221.58 ಕೋಟಿ ರೂ.ಯಷ್ಟು ನಷ್ಟ ಅನುಭವಿಸಿದೆ. ನಾಲ್ಕು ನಿಗಮಗಳಿಗೆ ಬಂದ ಆದಾಯ ಒಟ್ಟು 6254.40 ಕೋಟಿ ರೂ.ಯಷ್ಟಿದೆ. ಈ ಪೈಕಿ ಸರ್ಕಾರದಿಂದ ಪಡೆದ ಸಹಾಯಧನ 1977.41 ಕೋಟಿ ರೂ. ಆಗಿದೆ. ಒಟ್ಟು ವೆಚ್ಚ 7475.98 ಕೋಟಿ ರೂ.ಯಿದೆ. ಆ ಮೂಲಕ ಬರೋಬ್ಬರಿ 1221.58 ಕೋಟಿ ರೂ. ನಷ್ಟ ಸಂಭವಿಸಿದೆ. 2020-21ರಲ್ಲಿ ಇಂಧನ ವೆಚ್ಚ 2001.51 ಕೋಟಿ ರೂ. ಹಾಗೂ ಸಿಬ್ಬಂದಿ ವೆಚ್ಚ ಸುಮಾರು 4042 ಕೋಟಿ ರೂ.ಯಷ್ಟಿದೆ.
ಕೆಎಸ್ಆರ್​ಟಿಸಿ:
ಒಟ್ಟು ವೆಚ್ಚ- 2667.59 ಕೋಟಿ ರೂ.
ಒಟ್ಟು ಆದಾಯ- 2239 ಕೋಟಿ ರೂ.
ನಷ್ಟ- 428.59 ಕೋಟಿ ರೂ.
ಇಂಧನ ವೆಚ್ಚ- 774.39 ಕೋಟಿ ರೂ.
ಸಿಬ್ಬಂದಿ ವೆಚ್ಚ- 1359.61ಕೋಟಿ ರೂ.
ಬಿಎಂಟಿಸಿ:
ಒಟ್ಟು ವೆಚ್ಚ- 1766.36 ಕೋಟಿ ರೂ.
ಒಟ್ಟು ಆದಾಯ- 1463.15 ಕೋಟಿ ರೂ.
ನಷ್ಟ- 303.21ಕೋಟಿ ರೂ.
ಇಂಧನ ವೆಚ್ಚ- 361.67 ಕೋಟಿ ರೂ.
ಸಿಬ್ಬಂದಿ ವೆಚ್ಚ- 1059.06 ಕೋಟಿ ರೂ.
ಎನ್​ಡಬ್ಲ್ಯುಆರ್​ಟಿಸಿ:
ಒಟ್ಟು ವೆಚ್ಚ- 1597.60ಕೋಟಿ ರೂ.
ಒಟ್ಟು ಆದಾಯ- 1293.08ಕೋಟಿ ರೂ.
ನಷ್ಟ- 304.52 ಕೋಟಿ ರೂ.
ಇಂಧನ ವೆಚ್ಚ- 453.26 ಕೋಟಿ ರೂ.
ಸಿಬ್ಬಂದಿ ವೆಚ್ಚ- 862.30 ಕೋಟಿ ರೂ.
ಎನ್​ಈಆರ್​ಟಿಸಿ:
ಒಟ್ಟು ವೆಚ್ಚ- 1444.43 ಕೋಟಿ ರೂ.
ಒಟ್ಟು ಆದಾಯ- 1259.17 ಕೋಟಿ ರೂ.
ನಷ್ಟ- 185.26 ಕೋಟಿ ರೂ.
ಇಂಧನ ವೆಚ್ಚ- 412.19 ಕೋಟಿ ರೂ.
ಸಿಬ್ಬಂದಿ ವೆಚ್ಚ- 761.84 ಕೋಟಿ ರೂ.

ABOUT THE AUTHOR

...view details