ಬೆಂಗಳೂರು: ದಕ್ಷಿಣ ಭಾರತದ ಸಿನಿಮಾಗಳನ್ನು ತನ್ನ ಬಳಕೆದಾರರಿಗೆ ಒದಗಿಸಲು ರಿಲಾಯನ್ಸ್ ಜಿಯೋ, ಸನ್ ಎನ್‌ಎಕ್ಸ್‌ಟಿ (SUN NXT ) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸನ್ ಎನ್‌ಎಕ್ಸ್‌ಟಿ ಬಳಿ ಇರುವ ಬಳಕೆದಾರರು ಜಿಯೋ ಸಿನಿಮಾದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಬಹುದು.
ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಾವಿರಾರು ಚಿತ್ರಗಳು ಈಗ ಜಿಯೋ ಸಿನಿಮಾ ಬಳಕೆದಾರರಿಗೆ ಲಭ್ಯವಾಗಲಿವೆ. ಆದರೆ ಟಿವಿ ಶೋಗಳು ಅದರಲ್ಲಿ ಸಿಗುವುದಿಲ್ಲ. ಸನ್ ಎನ್‌ಎಕ್ಸ್‌ಟಿಯ ಹಲವು ಟಿವಿ ಶೋಗಳು ಹಾಗೂ ಚಾನೆಲ್‌ಗಳು ಜಿಯೋ ಟಿವಿಯಲ್ಲಿ ಇರಲಿದೆ. ಈ ಕುರಿತಾಗಿ ವೊಡಾಫೋನ್ ನಂತರ ಜಿಯೋ ಜೊತೆ ಸನ್ ಎನ್‌ಎಕ್ಸ್‌ಟಿ ಒಪ್ಪಂದ ಮಾಡಿಕೊಂಡಿದೆ.
ಆನ್-ಡಿಮಾಂಡ್ ವಿಡಿಯೊ ಪ್ಲಾಟ್‌ಫಾರ್ಮ್ ಆಗಿರುವ ಜಿಯೋ ಸಿನಿಮಾ ಲಕ್ಷಾಂತರ ಜಿಯೋ ಬಳಕೆದಾರರನ್ನು ವಿಶೇಷವಾಗಿ ದಕ್ಷಿಣ ಭಾರತೀಯರಿಗೆ ತಮ್ಮದೇ ಭಾಷೆಯ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಜಿಯೋ ಬಳಕೆದಾರರು ಉಚಿತವಾಗಿ ಜಿಯೋ ಸಿನಿಮಾ ಆ್ಯಪ್ ಡೌನ್ ಲೋಡ್ ಮಾಡಿಕೊಂಡು “ಸೂಪರ್ ಸೌತ್ ಸ್ವಾಗ್”ನ ಭಾಗವಾಗಿ ಸೂಪರ್ ಸ್ಟಾರ್‌ಗಳಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ತಲೈವರ್ ರಜನಿಕಾಂತ್, ಇಳೆಯತಲಪತಿ ವಿಜಯ್, ಅಲ್ಲು ಅರ್ಜುನ್, ತಲಾ ಅಜಿತ್ ಕುಮಾರ್, ಮಮ್ಮುಟ್ಟಿ, ಮಹೇಶ್ ಬಾಬುರಂತಹ ಅನೇಕ ಸ್ಟಾರ್‌ಗಳ ಸಿನಿಮಾ ನೋಡಬಹುದಾಗಿದೆ.
ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್‌ನ ಸಿನಿಮಾಗಳನ್ನು ಮೊಬೈಲ್ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ನಲ್ಲಿ ವೀಕ್ಷಿಸಿಬಹುದು.