ಕರ್ನಾಟಕ

karnataka

ETV Bharat / business

ವಿಶೇಷ ಅಂಕಣ: ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್, ಅಪ್ಲೋಡ್​​ ವಿಷಯದಲ್ಲಿ ವೊಡಾಫೋನ್ ಫಸ್ಟ್​ - ಟೆಲಿಕಾಂ ನಿಯಂತ್ರಕ ಟ್ರಾಯ್

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ನೈಜ-ಸಮಯದ ಆಧಾರದ ಮೇಲೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಂಗ್ರಹಿಸಿದ ಡೇಟಾದಿಂದ ಸರಾಸರಿ ನೆಟ್‌ವರ್ಕ್ ವೇಗವನ್ನು ಲೆಕ್ಕಾಚಾರ ಮಾಡುತ್ತದೆ.

jio-tops-4g-download-speed-chart-vodafone-in-upload-in-september-trai
ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್, ಅಪ್‌ಲೋಡ್ ವಿಷಯದಲ್ಲಿ ವೊಡಾಫೋನ್ ಪ್ರಥಮ

By

Published : Oct 14, 2020, 9:59 AM IST

ಹೈದರಾಬಾದ್: ಟೆಲಿಕಾಂ ನಿಯಂತ್ರಕ ಟ್ರಾಯ್‌ ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ರಿಲಯನ್ಸ್ ಜಿಯೋ ಸೆಕೆಂಡಿಗೆ ಸರಾಸರಿ 19.3 ಮೆಗಾಬಿಟ್ (mbps) ಡೌನ್‌ಲೋಡ್ ವೇಗವನ್ನು ಹೊಂದಿರುವ ದೇಶದ ವೇಗದ ಮೊಬೈಲ್ ನೆಟ್‌ವರ್ಕ್ ಆಗಿದೆ. ಅಪ್ಲೋಡ್​ ವಿಷಯದಲ್ಲಿ ವೊಡಾಫೋನ್ ಅತಿ ಹೆಚ್ಚು ವೇಗವನ್ನು ದಾಖಲಿಸಿದೆ.

ಜಿಯೋ ದೇಶದ ವೇಗದ ಮೊಬೈಲ್ ನೆಟ್‌ವರ್ಕ್, ಅಪ್‌ಲೋಡ್ ವಿಷಯದಲ್ಲಿ ವೊಡಾಫೋನ್ ಪ್ರಥಮ

ಜಿಯೋ ನಂತರದಲ್ಲಿ 8.6 ಎಮ್‌ಬಿಪಿಎಸ್ ವೇಗವನ್ನು ಹೊಂದಿರುವ ಐಡಿಯಾ ಸೆಲ್ಯುಲಾರ್ ನೆಟ್‌ವರ್ಕ್ (ಈಗ ವೊಡಾಫೋನ್ ಐಡಿಯಾ) ಎರಡನೇ ಸ್ಥಾನದಲ್ಲಿದ್ದು, ವೊಡಾಫೋನ್ 7.9 ಎಮ್​ಬಿಪಿಎಸ್ ವೇಗವನ್ನು ಹಾಗೂ ಭಾರ್ತಿ ಏರ್‌ಟೆಲ್ 7.5 ಎಮ್​ಬಿಪಿಎಸ್ ಡೌನ್‌ಲೋಡ್ ವೇಗದ ಸೇವೆಯನ್ನು ನೀಡುತ್ತಿವೆ ಎಂದು ಅಕ್ಟೋಬರ್ 10 ರಂದು ನವೀಕರಿಸಿದ ಡೇಟಾವನ್ನು ಟ್ರಾಯ್ ಬಿಡುಗಡೆ ಮಾಡಿದೆ.

ವೊಡಾಫೋನ್ ಮತ್ತು ಐಡಿಯಾ ತಮ್ಮ ಮೊಬೈಲ್ ವ್ಯವಹಾರಗಳನ್ನು ವಿಲೀನಗೊಳಿಸಿದ್ದರೂ, ಎರಡೂ ಕಂಪನಿಗಳ ನೆಟ್‌ವರ್ಕ್‌ಗಳ ಏಕೀಕರಣವು ಪ್ರಸ್ತುತದಲ್ಲಿರುವುದರಿಂದ ಟ್ರಾಯ್ಸ್ ಅವರ ಕಾರ್ಯಕ್ಷಮತೆಯನ್ನು ಪ್ರತ್ಯೇಕವಾಗಿ ಅಳೆಯುತ್ತಿದೆ. ಖಾಸಗಿ ಸಂಸ್ಥೆ ಓಪನ್‌ ಸಿಗ್ನಲ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ 49 ನಗರಗಳಲ್ಲಿ ಭಾರ್ತಿ ಏರ್‌ಟೆಲ್ ಭಾರತದಲ್ಲಿ ವೇಗವಾಗಿ ಡೌನ್‌ಲೋಡ್ ವೇಗವನ್ನು ಹೊಂದಿದೆ ಎಂದು ಘೋಷಿಸಿದ ನಂತರ ಈ ವರದಿ ಬಂದಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತನ್ನ ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ನೈಜ - ಸಮಯದ ಆಧಾರದ ಮೇಲೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಂಗ್ರಹಿಸಿದ ಡೇಟಾದಿಂದ ಸರಾಸರಿ ನೆಟ್‌ವರ್ಕ್ ವೇಗವನ್ನು ಲೆಕ್ಕಾಚಾರ ಮಾಡುತ್ತದೆ. ಟ್ರಾಯ್ ಚಾರ್ಟ್ ಪ್ರಕಾರ, ಆಗಸ್ಟ್ ನಲ್ಲಿ ದಾಖಲಾದ ದತ್ತಾಂಶಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ನಲ್ಲಿ ಎಲ್ಲ ಖಾಸಗಿ ಟೆಲಿಕಾಂ ಆಪರೇಟರ್ ಗಳ ಸರಾಸರಿ ವೇಗ ಹೆಚ್ಚಾಗಿದೆ.

ರಿಲಯನ್ಸ್ ಜಿಯೋ ನೆಟ್‌ವರ್ಕ್‌ನಲ್ಲಿ ಡೌನ್ಲೋಡ್​ ವೇಗ ಸೆಪ್ಟೆಂಬರ್‌ನಲ್ಲಿ ಶೇ 21 ರಷ್ಟು ಏರಿಕೆಯಾಗಿದ್ದು, ಆಗಸ್ಟ್‌ನಲ್ಲಿ 15.9 ಎಂ‌ಬಿಪಿಎಸ್‌ ನಷ್ಟು ಇದ್ದ ವೇಗ 19.3 ಎಮ್‌ಬಿಪಿಎಸ್ ಗೆ ಏರಿಕೆಯಾಗಿದೆ. ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಶೇ. 7 ರಷ್ಟು, ವೊಡಾಫೋನ್ ಮತ್ತು ಐಡಿಯಾ ನೆಟ್‌ವರ್ಕ್‌ನಲ್ಲಿ ಶೇಕಡಾ 1-3 ರಷ್ಟು ಹೆಚ್ಚಾಗಿದೆ.

ಡೌನ್‌ಲೋಡ್ ವೇಗವು ವಿವಿಧ ಅಪ್ಲಿಕೇಶನ್‌ಗಳ ಕಂಟೆಂಟ್‌ಗಳನ್ನು ನೋಡಲು ಸಹಾಯ ಮಾಡುತ್ತದೆ. ಆದರೆ ಅಪ್ಲೋಡ್​​​ ವೇಗವು ಚಂದಾದಾರರಿಗೆ ಫೋಟೋಗಳು ಮತ್ತು ವಿಡಿಯೋಗಳಂತಹ ವಿಷಯವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ವೊಡಾಫೋನ್ ಗರಿಷ್ಠ ಸರಾಸರಿ ಅಪ್ಲೋಡ್​​ ವೇಗವನ್ನು 6.5 ಎಂ‌ಬಿಪಿಎಸ್ ದಾಖಲಿಸಿದ್ದು, ಐಡಿಯಾ 6.4 ಎಂ‌ಬಿಪಿಎಸ್ ಅಪ್ಲೋಡ್​ ವೇಗವನ್ನು ಹೊಂದಿದೆ. ಭಾರತಿ ಏರ್‌ಟೆಲ್ ಮತ್ತು ಜಿಯೋ ನೆಟ್‌ವರ್ಕ್ ತಲಾ 3.5 ಎಮ್‌ಬಿಪಿಎಸ್ ವೇಗವನ್ನು ದಾಖಲಿಸಿವೆ.

ABOUT THE AUTHOR

...view details