ಕರ್ನಾಟಕ

karnataka

ETV Bharat / business

ಜಿಯೋ ಆದಾಯ ಶೇ 47.5ರಷ್ಟು ಜಿಗಿತ: ಪ್ರತಿ ಬಳಕೆದಾರನಿಂದ ಗಳಿಸಿದೆಷ್ಟು ಗೊತ್ತೇ? - ಜಿಯೋ ಪ್ಲಾಟ್​ಫಾರ್ಮ್​

2021ರ ಮಾರ್ಚ್ 31ರ ವೇಳೆಗೆ ತನ್ನ ಒಟ್ಟು ಗ್ರಾಹಕರ ಸಂಖ್ಯೆ 42.62 ಕೋಟಿಗಳಷ್ಟಿದೆ. ಈ ತ್ರೈಮಾಸಿಕದಲ್ಲಿ ಟೆಲಿಕಾಂನ ಮೇಜರ್​ ಜಿಯೋ ಸರಾಸರಿ ಆದಾಯ ಪ್ರತಿ ಬಳಕೆದಾರ (ಎಆರ್‌ಪಿಯು) 138.2 ರೂ.ಗಳಾಗಿದ್ದು, ಡಿಸೆಂಬರ್ ತ್ರೈಮಾಸಿಕದ 151 ರೂ.ಗಿಂತಲೂ ಕಡಿಮೆಯಾಗಿದೆ.

Jio
Jio

By

Published : Apr 30, 2021, 10:20 PM IST

ನವದೆಹಲಿ: ಜಿಯೋ ಪ್ಲಾಟ್‌ಫಾರ್ಮ್‌ಗಳು ಮಾರ್ಚ್ 2021ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ 3,508 ಕೋಟಿ ರೂ. ನಿವ್ವಳ ಲಾಭ ಗಳಿಸಿವೆ.

ಕಾರ್ಯಾಚರಣೆಗಳ ಆದಾಯವು 18,278 ಕೋಟಿ ರೂ.ಯಷ್ಟು ಬಂದಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ 9 ರಷ್ಟು ಹೆಚ್ಚಳವಾಗಿದೆ.

2021ರ ಮಾರ್ಚ್ 31ರ ವೇಳೆಗೆ ತನ್ನ ಒಟ್ಟು ಗ್ರಾಹಕರ ಸಂಖ್ಯೆ 42.62 ಕೋಟಿಗಳಷ್ಟಿದೆ. ಈ ತ್ರೈಮಾಸಿಕದಲ್ಲಿ ಟೆಲಿಕಾಂನ ಮೇಜರ್​ ಜಿಯೋ ಸರಾಸರಿ ಆದಾಯ ಪ್ರತಿ ಬಳಕೆದಾರ (ಎಆರ್‌ಪಿಯು) 138.2 ರೂ.ಗಳಾಗಿದ್ದು, ಡಿಸೆಂಬರ್ ತ್ರೈಮಾಸಿಕದ 151 ರೂ.ಗಿಂತಲೂ ಕಡಿಮೆಯಾಗಿದೆ.

2021ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಎಆರ್‌ಪಿಯು 138.2 ರೂ.ಗಳಾಗಿದ್ದು, ಇಂಟರ್​ಕನೆಕ್ಟ್ ಯೂಸೇಜ್ ಚಾರ್ಜಸ್​ಯಿಂದ (ಐಯುಸಿ) ಬಿಲ್ ಮತ್ತು ಕೀಪ್ 2021ರ ಜನವರಿ 1ರಿಂದ ಜಾರಿಗೆ ಬಂತು. ತ್ರೈಮಾಸಿಕದಲ್ಲಿ ಕಡಿಮೆ ದಿನಗಳ ದಿನಗಳು ಕೂಡ ಆದಾಯ ಕುಸಿತಕ್ಕೆ ಪ್ರೇರಕವಾದವು ಎಂದು ಕಂಪನಿ ತಿಳಿಸಿದೆ.

ಜೆಪಿಎಲ್ (ಜಿಯೋ ಪ್ಲಾಟ್‌ಫಾರ್ಮ್‌ಗಳು) ತನ್ನ ಮೊದಲ ಪೂರ್ಣ ವರ್ಷದ ಕಾರ್ಯಾಚರಣೆ ಆದಾಯ ಮತ್ತು ಇಬಿಐಟಿಡಿಎ ಕ್ರಮವಾಗಿ 73,503 ಕೋಟಿ ಮತ್ತು 32,359 ಕೋಟಿ ರೂ. ಆಗಿದೆ. ಕೋವಿಡ್ ಸಂಬಂಧಿತ ಸವಾಲುಗಳ ಹೊರತಾಗಿಯೂ 2021ರ ಹಣಕಾಸು ಪೂರ್ಣ ವರ್ಷಕ್ಕೆ ನಿವ್ವಳ ಲಾಭ 12,537 ಕೋಟಿ ರೂ. ಆಗಿದೆ.

ABOUT THE AUTHOR

...view details