ನವದೆಹಲಿ :ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಂಕಿಅಂಶಗಳ ಪ್ರಕಾರ, ರಿಲಯನ್ಸ್ ಜಿಯೋ ಮಾರ್ಚ್ ತಿಂಗಳಲ್ಲಿ 46.87 ಲಕ್ಷ ಗ್ರಾಹಕರಿಗೆ ಹೆಚ್ಚುವರಿಯಾಗಿ ಚಂದಾದಾರಿಕೆ ಹೊಂದಿದೆ.
ಇತರ ಎರಡು ಖಾಸಗಿ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ, ತಮ್ಮ ಚಂದಾದಾರರ ಸಂಖ್ಯೆಯನ್ನು ಕಳೆದುಕೊಂಡಿವೆ. ಮಾರ್ಚ್ ಅಂತ್ಯದ ವೇಳೆಗೆ ಭಾರ್ತಿ ಏರ್‌ಟೆಲ್‌ನ ಚಂದಾದಾರರ ಸಂಖ್ಯೆ 32.78 ಕೋಟಿಗೂ ಅಧಿಕವಾಗಿದ್ದು, 12.61ಲಕ್ಷದಷ್ಟು ಚಂದಾದಾರರು ಸೇವೆ ಸ್ಥಗಿತಗೊಳಿಸಿದ್ದಾರೆ. ವೊಡಾಫೋನ್-ಐಡಿಯಾ ಕೂಡ ಆ ತಿಂಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಕಳೆದುಕೊಂಡಿದೆ. 63.53 ಲಕ್ಷ ಬಳಕೆದಾರರು ಕಂಪನಿಯಿಂದ ದೂರ ಸರಿದಿದ್ದಾರೆ. ಒಟ್ಟು ಚಂದಾದಾರರ ಸಂಖ್ಯೆ 31.91 ಕೋಟಿಗೆ ತಲುಪಿದೆ.