ಮುಂಬೈ:ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಜೆಟ್ ಏರ್‌ವೇಸ್, ಕಳೆದ ಹಲವು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿಸಿಲ್ಲ. ಹೀಗಾಗಿ, ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಹಿರಿಯ ತಾಂತ್ರಿಕ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಪಾದನೆ ಕೇಳಿಬಂದಿದೆ.
ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ಶೈಲೇಶ್ ಸಿಂಗ್ (45) ಮೃತಪಟ್ಟ ವ್ಯಕ್ತಿ. ಇವರು ಕ್ಯಾನ್ಸರ್ನಿಂದಲೂ ಬಳಲುತ್ತಿದ್ದು ಆಗಾಗ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೆಡೆ ಖಾಯಿಲೆಯಿಂದ ತೀವ್ರ ಖಿನ್ನತೆ ಮತ್ತೊಂದೆೆಡೆ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದು ಮಹಡಿ ಮೇಲಿಂದ ಬಿದ್ದು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.