ನವದೆಹಲಿ: ತೀವ್ರ ಆರ್ಥಿಕ ನಷ್ಟದಲ್ಲಿರುವ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್ವೇಸ್ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಮೋದಿ 2.0 ಸರ್ಕಾರದಲ್ಲಿ ದಿವಾಳಿಯಾಗಲಿದೆ ಮೊದಲ ದೇಶಿ ವಿಮಾನ ಸಂಸ್ಥೆ..! -
ದಿವಾಳಿ ಪ್ರಕ್ರಿಯೆಗೆ ಒಳಪಟ್ಟ ಮೊದಲ ದೇಶಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ಪಾಲಾಗಲಿದೆ. ₹ 8 ಸಾವಿರ ಕೋಟಿ ಸಾಲ ವಸೂಲಿಗಾಗಿ ಕಳೆದ ಐದು ತಿಂಗಳಿಂದ ಸಂಸ್ಥೆಯನ್ನು ಮಾರಾಟ ಮಾಡಲು ಬ್ಯಾಂಕ್ಗಳ ಒಕ್ಕೂಟ ಪ್ರಯತ್ನ ನಡೆಸುತ್ತಿದ್ದರೂ ಹಲವು ಕಾರಣಗಳಿಂದ ಹಿನ್ನಡೆ ಆಗುತ್ತಿದೆ. 25 ವರ್ಷಗಳ ಹಿಂದೆ ಆರಂಭಗೊಂಡಿದ್ದ ಜೆಟ್ ಇತಿಹಾಸದ ಪುಟ ಸೇರಲಿದೆ.
2016ರ ಹಣಕಾಸು ನಷ್ಟ ಹಾಗೂ ದಿವಾಳಿ ಸಂಹಿತೆ ಕಾಯ್ದೆ ಅನ್ವಯ, ಜೆಟ್ ಏರ್ವೇಸ್ ವಿರುದ್ಧ ಸಾಂಸ್ಥಿಕ ದಿವಾಳಿ ಗೊತ್ತುವಳಿ ಪ್ರಕ್ರಿಯೆಗೆ (ಕಾರ್ಪೊರೇಟ್ ಇನ್ಸಾಲ್ವೆನ್ಸಿ ರೆಷ್ಯುಲುಶನ್ ಪ್ರೋಸಸ್: ಸಿಐಆರ್ಪಿ) ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರ (ಎನ್ಸಿಆರ್ಟಿ) ಆದೇಶದಲ್ಲಿ ತಿಳಿಸಲಾಗಿದೆ ಎಂದು ಜೆಟ್ ಏರ್ವೇಸ್ ಸಂಸ್ಥೆಯು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.