ನವದೆಹಲಿ :ಸೌಮ್ಯ ಮತ್ತು ಮಧ್ಯಮ ಕೋವಿಡ್-19 ರೋಗಲಕ್ಷಣ ಹೊಂದಿರುವವರ ಚಿಕಿತ್ಸೆಗೆ ನೀಡುವ 'ಫ್ಯಾವಿವೆಂಟ್' ಬ್ರಾಂಡ್ ಹೆಸರಿನ ಆಂಟಿವೈರಲ್ ಔಷಧಿಯ ಬೆಲೆಯನ್ನು 39 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಜೆನ್‌ಬರ್ಕ್ಟ್ ಫಾರ್ಮಾಸ್ಯುಟಿಕಲ್ಸ್ ಸಂಸ್ಥೆಯು ಫಾವಿಫಿರವಿರ್ ಔಷಧಿಯಡಿ 'ಫ್ಯಾವಿವೆಂಟ್' ಮಾತ್ರೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. 10 ಮಾತ್ರೆಗಳ ಸ್ಟ್ರಿಪ್ ತಲಾ ಒಂದು ಮಾತ್ರೆಯು 200 ಮಿ.ಗ್ರಾಂ. ಔಷಧಿಯ ಸಾಮರ್ಥ್ಯ ಹೊಂದಿರುತ್ತದೆ.
ಫಾರ್ಮಾ ಕಂಪನಿ ಬ್ರಿಂಟನ್ ಫಾರ್ಮಾಸ್ಯುಟಿಕಲ್ಸ್ 'ಫ್ಯಾವಿಟೋನ್'ವಾಟ್ ಎಂಬ ಬ್ರಾಂಡ್ ಹೆಸರಿನಲ್ಲಿ ಫಾವಿಪಿರವಿರ್ ಮಾತ್ರೆಯನ್ನು ಗರಿಷ್ಠ 59 ರೂ.ಗೆ ಮಾರಾಟ ಮಾಡುವುದಾಗಿ ಘೋಷಿಸಿತು. ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸಸ್ ಈಗಾಗಲೇ 'ಫ್ಯಾಬಿಫ್ಲೂವಾಟ್' ಎಂಬ ಬ್ರಾಂಡ್ ಹೆಸರಿನಲ್ಲಿ ಫಾವಿಪಿರವಿರ್ನ ಪ್ರತಿ ಟ್ಯಾಬ್ಲೆಟ್‌ಗೆ 75 ರೂ. ನಿಗದಿಪಡಿಸಿದೆ.
ಈ ವರ್ಷದ ಆರಂಭದಲ್ಲಿ ಜಪಾನ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಇನ್ಫ್ಲ್ಯುಯೆನ್ಸ್ ಚಿಕಿತ್ಸೆಗೆ ಬಳಸುವ ಆಂಟಿವೈರಲ್ ಔಷಧ ಫಾವಿಪಿರವಿರ್ ಭಾರತದಲ್ಲಿ ಕೋವಿಡ್-19 ಸೋಂಕಿತ ಮೈಲ್ಡ್ ಟು ಮಾಡಿರೇಟ್ ಇರುವವರಿಗೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.