ಕರ್ನಾಟಕ

karnataka

ETV Bharat / business

ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಜಪಾನ್​ ಕಂಪನಿ ಕೊಟ್ಟಿತ್ತು ದೀಪಾವಳಿಯ ಸಿಹಿ ಸುದ್ದಿ! - ಎಲೆಕ್ಟ್ರಿಕ್ ವಾಹನ

ಜಪಾನ್​ನ ಟೆಕ್ನೋಪ್ರೋ ಸಂಸ್ಥೆ ವಿದ್ಯುತ್ ವಾಹನ ಹೊಂದಿದವರಿಗೆ ಚಾರ್ಜ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್​​ಗಳನ್ನು ಸ್ಥಾಪಿಸಿದೆ. ನಿತ್ಯ ಏರುತ್ತಿರುವ ತೈಲ ಬೆಲೆಯಿಂದ ಮುಕ್ತಿ ಪಡೆಯಲು ವಾಹನ ಪ್ರಿಯರು ಎಲೆಕ್ಟ್ರಿಕ್​ ವಾಹನಗಳತ್ತ ಮುಖಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 26, 2019, 6:10 PM IST

ನವದೆಹಲಿ:ವಾಹನ ಪ್ರಿಯರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಸಬ್ಸಿಡಿ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಮಾರ್ಗ ಮಧ್ಯದಲ್ಲಿ ಬ್ಯಾಟರಿ ಚಾರ್ಚ್​​ ಖಾಲಿ ಆದ್ರೆ ಹೇಗಪ್ಪಾ ಎಂಬುವವರಿಗೆ ಜಪಾನ್​ ಕಂಪನಿಯೊಂದು ಪರಿಹಾರ ನೀಡಲಿದೆ.

ಜಪಾನ್​ನ ಟೆಕ್ನೋಪ್ರೋ ಸಂಸ್ಥೆ ವಿದ್ಯುತ್ ವಾಹನ ಹೊಂದಿದವರಿಗೆ ಚಾರ್ಜ್ ಮಾಡಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್​​ಗಳನ್ನು ಸ್ಥಾಪಿಸಿದೆ. ನಿತ್ಯ ಏರುತ್ತಿರುವ ತೈಲ ಬೆಲೆಯಿಂದ ಮುಕ್ತಿಪಡೆಯಲು ವಾಹನ ಪ್ರಿಯರು ಎಲೆಕ್ಟ್ರಿಕ್​ ವಾಹನಗಳತ್ತ ಮುಖಮಾಡಿದ್ದಾರೆ.

ಈ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸಮಸ್ಯೆ ಆರಂಭದಿಂದ ಎದುರಾಗಿತ್ತು. ನಡು ರಸ್ತೆಯಲ್ಲಿ ಬ್ಯಾಟರಿ ಪವರ್ ಕೈಕೊಟ್ಟರೆ ಪರದಾಡುವಂತೆ ಆಗಲಿದೆಯಾ ಎಂಬ ಅನುಮಾನ ಮೂಡಿತ್ತು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡ ಟೆಕ್ನೋಪ್ರೋ ಸಂಸ್ಥೆ, ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಿದೆ.

ಬೆಂಗಳೂರಿನಲ್ಲಿ ಗ್ಲೋಬಲ್ ಡೆಲಿವರಿ ಮತ್ತು ಟೆಕ್ನಿಕಲ್ ಇನ್ನೋವೇಷನ್ ಸೆಂಟರ್‌ನ ಸ್ಥಾಪಿಸುವ ಮೂಲಕ ಉದ್ಯೋಗವನ್ನು ಹೆಚ್ಚಿಸಿ ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಕಂಪನಿ ಹೊಂದಿದೆ. 2022-23ರ ಅಂತ್ಯದ ವೇಳೆಗೆ 10,000ಕ್ಕೂ ಅಧಿಕ ಎಂಜಿನಿಯರ್‌ಗಳು ಮತ್ತು ಇತರ ವೃತ್ತಿಪರರನ್ನು ನೇಮಿಸಿಕೊಳ್ಳುವ ಗುರಿ ಹೊಂದಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details