ಕರ್ನಾಟಕ

karnataka

ETV Bharat / business

ಗಗನ ಚುಂಬಿಸಿದ 'ಫ್ಲೈಯಿಂಗ್​ ಕಾರ್​'... ರಸ್ತೆ ಬದಲಿಗೆ ಆಗಸದಲ್ಲಿ ವಿಶ್ರಾಂತಿ: ವಿಡಿಯೋ - ಟೊಕಿಯೋ

ಟೊಕಿಯೋ ಮೂಲದ ವಿಡಿಯೋ ಗೇಮಿಂಗ್​ ಕಂಪನಿ ಬಂದೈ ನಾಮ್​ಕೋ ಹೊಲ್ಡಿಂಗ್ಸ್​ ನೆಲ ಮಟ್ಟದಿಂದ 10 ಅಡಿ ಎತ್ತರದಲ್ಲಿ ಒಂದು ನಿಮಿಷ ಕಾಲ ಕಾರನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಯಾವ ಪ್ರಯಾಣಿಕರಿಲ್ಲದೇ ಪರೀಕ್ಷಾರ್ಥ ಹಾರಾಟ ನಡೆಸುವಲ್ಲಿ ಯಶ ಕಂಡಿದ್ದು, ಹಾರಾಟದ ವೇಳೆ ನೋಡಲು ದೊಡ್ಡ ಗಾತ್ರದ ಡ್ರೋನ್ ಮಾದರಿಯಲ್ಲಿ ಕಾರು ಕಾಣುತ್ತಿತ್ತು.

ಫ್ಲೈಯಿಂಗ್​ ಕಾರ್

By

Published : Aug 7, 2019, 8:17 PM IST

ಟೊಕಿಯೋ: ಕಳೆದೊಂದು ದಶಕದಿಂದ ಹಾರುವ ಕಾರು ಪರಿಕಲ್ಪನೆ ಜಗತಿನಾದ್ಯಂತ ಮೊಳಕೆಯೊಡದಿದ್ದು, ಹಲವು ರಾಷ್ಟ್ರಗಳ ಪ್ರಾಯೋಗಿಕ ಹಂತದಲ್ಲಿ ಇರುವಾಗಲೇ ಇತ್ತ ಜಪಾನ್ ಫ್ಲೈಯಿಂಗ್​ ಕಾರಿನ ಪರೀಕ್ಷಾರ್ಥ ಹಾರಾಟ ಯಶಸ್ವಿಗೊಳಿಸಿದೆ.

ಟೊಕಿಯೋ ಮೂಲದ ವಿಡಿಯೋ ಗೇಮಿಂಗ್​ ಕಂಪನಿ ಬಂದೈ ನಾಮ್​ಕೋ ಹೊಲ್ಡಿಂಗ್ಸ್​ ನೆಲ ಮಟ್ಟದಿಂ 10 ಅಡಿ ಎತ್ತರದಲ್ಲಿ ಒಂದು ನಿಮಿಷ ಕಾಲ ಕಾರನ್ನು ಹಾರಿಸುವಲ್ಲಿ ಯಶಸ್ವಿಯಾಗಿದೆ. ಯಾವ ಪ್ರಯಾಣಿಕರಿಲ್ಲದೇ ಪರೀಕ್ಷಾರ್ಥ ಹಾರಾಟ ನಡೆಸುವಲ್ಲಿ ಯಶ ಕಂಡಿದ್ದು, ಹಾರಾಟದ ವೇಳೆ ನೋಡಲು ದೊಡ್ಡ ಗಾತ್ರದ ಡ್ರೋನ್ ಮಾದರಿಯಲ್ಲಿ ಕಾಣುತ್ತಿತ್ತು.

80ಕ್ಕೂ ಅಧಿಕ ಸಂಸ್ಥೆಗಳು ಪ್ರಾಯೋಜತ್ವ ಪಡೆದ ಎನ್​ಇಸಿ ಹಾಗೂ ಕಾರ್ಟಿವಟೋರ್​ ಸಂಸ್ಥೆ ಸಿದ್ಧಪಡಿಸಿರುವ ಫ್ಲೈಯಿಂಗ್​ ಕಾರ್​ ಬ್ಯಾಟರಿಯ ನೆರವಿನಿಂದ ಹಾರಾಟ ನಡೆಸಲಿದೆ. ಈ ವಾಹನದಲ್ಲಿ ಸಾಕಷ್ಟು ಬದಲಾವಣೆ ತರುವ ಅಗತ್ಯವಿದ್ದು, ಹಾರಾಟ ನಡೆಸುವಾಗ ಕಾರಿನ ಹಾಗೂ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಅಗತ್ಯವಿರುವ ಅಧಿಕ ಸಾಮರ್ಥ್ಯದ ಬ್ಯಾಟರಿಗಳನ್ನು ಅಳವಡಿಸುವ‌ ಬಗ್ಗೆ ವಿನ್ಯಾಸ ನಡೆಸಬೇಕಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸಂಚಾರ ದಟ್ಟಣೆ ಪ್ರದೇಶದಲ್ಲಿ ಇದರಿಂದ ಸುಲಭವಾಗಿ ದಾಟಿ ಮುಂದೆ ಹೋಗಬಹುದು, ಸರಕು ಸಾಗಣೆ ಹಾಗೂ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿಯೂ ಬಳಸಬಹುದಾಗಿದೆ. ಈ ಕಾರು 2023ರ ವೇಳೆಗೆ ಮಾರುಕಟ್ಟೆ ಬರುವ ಸಾಧ್ಯತೆಯಿದ್ದು, ಮುಂದಿನ 11 ವರ್ಷಗಳಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿ ಲಭ್ಯವಾಗಲಿದೆ.

ಜಪಾನ್​​ನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದ ಫ್ಲೈಯಿಂಗ್ ಕಾರು

ಭಾರತಕ್ಕೂ ಬರಲಿವೆ ಹಾರುವ ಕಾರು:

ಭಾರತದಲ್ಲಿ ದಿನದಿಂದ ದಿನಕ್ಕೆ ನಗರೀಕರಣ, ವಾಹನ ದಟ್ಟಣೆ, ಟ್ರಾಫಿಕ್ ಸಮಸ್ಯೆ, ವಾಯುಮಾಲಿನ್ಯಗಳಿಂದ ಪ್ರಯಾಣ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಭಾರತಕ್ಕೂ ಹಾರುವ ಕಾರುಗಳು ಲಗ್ಗೆ ಇಡಲಿವೆ ಎಂಬುದನ್ನು 'ವೈಬ್ರೆಂಟ್​ ಗುಜರಾತ್​' ಸಮಾವೇಶ ಸಾದರಪಡಿಸಿತ್ತು.

ಡಚ್ ಮೂಲದ ಟಿಎಎಲ್​-ವಿ ಕಂಪನಿಯೊಂದು ಹಾರುವ ಕಾರನ್ನು ತಯಾರಿಸಿ ಆ ಕಾರ್ಯಕ್ರಮದಲ್ಲಿ ಉದ್ಯಮಿಗಳ ಗಮನಸೆಳೆದಿತ್ತು. 3 ವೇರಿಯೆಂಟ್‌ಗಳಲ್ಲಿ ವಿನ್ಯಾಸಗೊಳಿಸಿದ್ದ ಟಿಎಎಲ್​-ವಿ ಕಂಪನಿ, 4.18 ಕೋಟಿ ರೂ.ಯಿಂದ 2.52 ಕೋಟಿ ರೂ.ಗೆ ಬೆಲೆ ನಿಗದಿಪಡಿಸಿತ್ತು. 2021ಕ್ಕೆ ಈ ಮೂರು ಹಾರುವ ಕಾರುಗಳು ಎಂಟ್ರಿ ಕೊಡಲಿವೆ ಎಂದು ಅದು ವಾಗ್ದಾನ ಮಾಡಿತ್ತು.

ABOUT THE AUTHOR

...view details