ಬೀಜಿಂಗ್: ಚೀನಾದ ಅತಿದೊಡ್ಡ ಇ- ಕಾಮರ್ಸ್ ವಾಣಿಜ್ಯ ಸಂಸ್ಥೆಯಾದ ಅಲಿಬಾಬಾ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ ಜಾಕ್ ಮಾ, ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರೂ ತಮ್ಮ ಉದಿಮೆ ವ್ಯವಹಾರ ಬಿಟ್ಟಿಲ್ಲ. ಐಪಿಒ ಮೂಲಕ ಜಾಕ್ ಮತ್ತೆ ಉದ್ಯಮಿ ಲೋಕದಲ್ಲಿ ಸುದ್ದಿ ಮಾಡುತ್ತಿದ್ದಾರೆ.
ಅಲಿಬಾಬಾ ಒಡೆತನದ ಫಿನ್‌ಟೆಕ್ ಕಂಪನಿಯ ಆಂಟ್ ಗ್ರೂಪ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಹಾಂಗ್ ಕಾಂಗ್ ಮತ್ತು ಶಾಂಘೈನಲ್ಲಿನ ಎರಡೂ ಸೂಚ್ಯಂಕದಲ್ಲಿ ವೈಯಕ್ತಿಕ ಹೂಡಿಕೆದಾರರಿಂದ 3 ಟ್ರಿಲಿಯನ್ ಡಾಲರ್ ಮೌಲ್ಯದ ಬಿಡ್ ಪಡೆದುಕೊಂಡಿದೆ. ಇದು ಭಾರತದ ಜಿಡಿಪಿಗಿಂತ (ಸುಮಾರು 2.72 ಲಕ್ಷ ಕೋಟಿ ಡಾಲರ್) ಅತ್ಯಧಿಕವಾಗಿದೆ.
ಜ್ಯಾಕ್ ಮಾ ಅವರ ಆಂಟ್ ಗ್ರೂಪ್ ಕೋ ಲಿಮಿಟೆಡ್‌ನ ಷೇರುಗಳು ಅಮೆರಿಕ ಅಧ್ಯಕ್ಷರ ಚುನಾವಣೆಯ ಎರಡು ದಿನಗಳ ನಂತರ 2020ರ ನವೆಂಬರ್ 5ರಂದು ಹಾಂಕಾಂಗ್ ಮತ್ತು ಶಾಂಘೈನಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ. ಆಂಟ್ ಫೈನಾನ್ಷಿಯಲ್ 34.4 ಬಿಲಿಯನ್ (ಸುಮಾರು 2.54 ಲಕ್ಷ ಕೋಟಿ ರೂ.) ತನಕ ಬಂಡವಾಳ ಸಂಗ್ರಹಿಸುವ ಮಹತ್ವಾಕಾಂಕ್ಷೆ ಗುರಿ ಇರಿಸಿಕೊಂಡಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಹಾಂಕಾಂಗ್ನಲ್ಲಿ ಆಂಟ್ ಗ್ರೂಪ್ ಐಪಿಒಗೆ ಬಿಡ್ಡಿಂಗ್ ವ್ಯಾಪಕ ಬೇಡಿಕೆ ಇದೆ. ಹೂಡಿಕೆದಾರರ ಆರ್ಡರ್ಗಳಿಗೆ ಬ್ರೋಕರೇಜ್‌ನ ಪ್ಲಾಟ್‌ಫಾರ್ಮ್ ಅಲುಗಾಡುತ್ತಿದೆ. ಶಾಂಘೈ ಪೇಟೆಯಲ್ಲಿ ಚಿಲ್ಲರೆ ವಿಭಾಗದ ಬೇಡಿಕೆಯು ಆರಂಭಿಕ ಪೂರೈಕೆ 870 ಪಟ್ಟು ಮೀರಿದೆ.
ಸುಮಾರು 315 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯಮಾಪನದ ಸಮೂಹವು ಈಜಿಪ್ಟ್‌ನ ಜಿಡಿಪಿ 303 ಬಿಲಿಯನ್ ಡಾಲರ್ ಮತ್ತು ಫಿನ್ಲ್ಯಾಂಡ್ನ 269 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮೌಲ್ಯದ್ದಾಗಿದೆ. ಜ್ಯಾಕ್ ಮಾ ಅವರ ಆಂಟ್ ಗ್ರೂಪ್ ಐಪಿಒ 2019ರಲ್ಲಿ ತೈಲ ದೈತ್ಯ ಸೌದಿ ಅರಾಮ್ಕೊ ಅವರ 29.4 ಬಿಲಿಯನ್ ಐಪಿಒ ಅನ್ನು ದಾಖಲೆಯ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೂ ಮೊದಲು 2014ರಲ್ಲಿ 25 ಬಿಲಿಯನ್ ಡಾಲರ್ ಸಂಗ್ರಹಿಸಿದ್ದು, ಅಲಿಬಾಬಾ ಗ್ರೂಪ್‌ನ ಅದುವರೆಗಿನ ಅತಿದೊಡ್ಡ ಐಪಿಒ ಆಗಿತ್ತು.
ಬ್ಲೂಮ್‌ಬರ್ಗ್ ಪ್ರಕಾರ, ಆಂಟಿ ಸಮೂಹದ ಮಾರುಕಟ್ಟೆ ಮೌಲ್ಯಮಾಪನವು ಜೆಪಿ ಮೋರ್ಗಾನ್ & ಕಂಪನಿಗಿಂತ ದೊಡ್ಡದಾಗಿದೆ . ಪೇಪಾಲ್ ಹೋಲ್ಡಿಂಗ್ಸ್ ಇಂಕ್(238 ಬಿಲಿಯನ್ ಡಾಲರ್) ಮತ್ತು ವಾಲ್ಟ್ ಡಿಸ್ನಿ ಕಂಪನಿ (232 ಬಿಲಿಯನ್ ಡಾಲರ್) ಇದರ ಹಿಂದಿವೆ. ಐಬಿಎಂ ಕಾರ್ಪೊರೇಷನ್ಗಿಂತ ಮೂರು ಪಟ್ಟು ಮತ್ತು ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ.