ಕರ್ನಾಟಕ

karnataka

ETV Bharat / business

'ಜಾಕ್​ ಮಾ' ಮಂಗಮಾಯ ಸುದ್ದಿ: ಭಾರತೀಯ ಹೂಡಿಕೆದಾರರಲ್ಲಿ ತಳಮಳವೇಕೆ? - ಆಂಟ್​ ಗ್ರೂಪ್​ನಲ್ಲಿ ಭಾರತೀಯರ ಹೂಡಿಕೆ

ಖಾಸಗಿ ಬಂಡವಾಳ ಮಾರುಕಟ್ಟೆಗಳಲ್ಲಿ ಡೇಟಾ ಒದಗಿಸುವ ಅಮೆರಿಕ ಮೂಲದ ಪಿಚ್‌ಬುಕ್ ಪ್ರಕಾರ, ಅಲಿಬಾಬಾ ಮತ್ತು ಅದರ ಅಂಗ ಸಂಸ್ಥೆಗಳಾದ ಅಲಿಬಾಬಾ ಕ್ಯಾಪಿಟಲ್ ಪಾಲುದಾರ ಹಾಗೂ ಆಂಟ್ ಗ್ರೂಪ್​ನಲ್ಲಿ (ಮೊದಲು ಆಂಟ್​ ಫೈನಾನ್ಸ್​) 2015ರಿಂದೀಚೆಗೆ ಭಾರತೀಯ ಕಂಪನಿಗಳಲ್ಲಿ 2 ಬಿಲಿಯನ್‌ಗಿಂತ ಹೆಚ್ಚಿನ ಡಾಲರ್​ ಹೂಡಿಕೆ ಮಾಡಲಾಗಿದೆ.

Jack Ma
ಜಾಕ್ ಮಾ

By

Published : Jan 4, 2021, 8:40 PM IST

ನವದೆಹಲಿ: ಭಾರತದ ಉದ್ಯಮಿಗಳ ಪಾಲಿಗೆ ಇದೊಂದು ಡಬಲ್ ಹೊಡೆತ ಎಂದು ಕರೆಯಬಹುದು. ಮೊದಲನೇಯದಾಗಿ; ಕಳೆದ ವರ್ಷ ಆಗಸ್ಟ್‌ನಲ್ಲಿ ಚೀನಾದ ಅಲಿಬಾಬಾ ಗ್ರೂಪ್ ಉಭಯ ರಾಷ್ಟ್ರಗಳ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡುವ ಯೋಜನೆ ತಡೆ ಹಿಡಿದಿದೆ ಎಂದು ವರದಿಗಳು ಬಂದವು. ಈಗ, ಅಲಿಬಾಬಾ ಸಂಸ್ಥಾಪಕ ಮತ್ತು ಫಿನ್ಟೆಕ್ ಸಾಹಸೋದ್ಯಮ ಆಂಟ್ ಗ್ರೂಪ್​ನ ಮಾಲೀಕ ಜಾಕ್ ಮಾ (3.6 ಲಕ್ಷ ಕೋಟಿ ರೂ. ಸಂಪತ್ತಿನ ಒಡೆಯ) 'ಕಣ್ಮರೆ ಆಗಿದ್ದಾರೆ' ಎಂಬ ಮಾಧ್ಯಮಗಳ ವರದಿಗಳು ಉನ್ನತ ದರ್ಜೆಯ ಭಾರತೀಯ ಡಿಜಿಟಲ್ ಸಂಸ್ಥೆಗಳಿಗೆ ಮತ್ತೊಂದು ರೀತಿಯ ಆತಂಕಕ್ಕೆ ಕಾರಣವಾಗಿದೆ.

ಖಾಸಗಿ ಬಂಡವಾಳ ಮಾರುಕಟ್ಟೆಗಳಲ್ಲಿ ಡೇಟಾ ಒದಗಿಸುವ ಅಮೆರಿಕ ಮೂಲದ ಪಿಚ್‌ಬುಕ್ ಪ್ರಕಾರ, ಅಲಿಬಾಬಾ ಮತ್ತು ಅದರ ಅಂಗ ಸಂಸ್ಥೆಗಳಾದ ಅಲಿಬಾಬಾ ಕ್ಯಾಪಿಟಲ್ ಪಾಲುದಾರ ಹಾಗೂ ಆಂಟ್ ಗ್ರೂಪ್​ನಲ್ಲಿ (ಮೊದಲು ಆಂಟ್​ ಫೈನಾನ್ಸ್​) 2015 ರಿಂದೀಚೆಗೆ ಭಾರತೀಯ ಕಂಪನಿಗಳಲ್ಲಿ 2 ಬಿಲಿಯನ್‌ಗಿಂತ ಹೆಚ್ಚಿನ ಡಾಲರ್​ ಹೂಡಿಕೆ ಮಾಡಲಾಗಿದೆ.

ಇದನ್ನೂ ಓದಿ: ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿ: 1,500 ನೌಕರರ ನೇಮಕಾತಿ ಘೋಷಿಸಿದ ನಿಸ್ಸಾನ್​ ಮೋಟಾರ್

ವೆಂಚರ್ ಇಂಟೆಲಿಜೆನ್ಸ್‌ನ ಅಂಕಿ-ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಚೀನಾದ ಹೂಡಿಕೆದಾರರು (ಟೆನ್ಸೆಂಟ್ ಸೇರಿ) ಭಾರತೀಯ ಸ್ಟಾರ್ಟ್​ಅಪ್​ನಲ್ಲಿ 5.7 ಶತಕೋಟಿ ಡಾಲರ್​​ಗೂ ಅಧಿಕ ಹಣ ಸುರಿದಿದ್ದಾರೆ. ಅಲಿಬಾಬಾ ಗ್ರೂಪ್ ತನ್ನ ಫಿನ್​ಟೆಕ್ ಉದ್ಯಮಗಳ ಮೂಲಕ ಡಿಜಿಟಲ್ ಪಾವತಿ ಪ್ಲಾಟ್​​ಫಾರ್ಮ್​ ಪೇಟಿಎಂ, ಆನ್‌ಲೈನ್ ಆಹಾರ ವಿತರಣಾ ಜೊಮ್ಯಾಟೊ ಮತ್ತು ಬಿಗ್‌ಬಾಸ್ಕೆಟ್ ಸೇರಿವೆ.

ಕಳೆದ ವರ್ಷ ಜನವರಿಯಲ್ಲಿ ಜೊಮ್ಯಾಟೊ ಆಂಟ್ ಫೈನಾನ್ಶಿಯಲ್​ನಿಂದ 150 ಮಿಲಿಯನ್ ಡಾಲರ್​ ಸಂಗ್ರಹಿಸಿದ್ದು, 2018ರಿಂದ ಪ್ರಮುಖ ಹೂಡಿಕೆದಾರನಾಗಿದೆ.

ನವೆಂಬರ್​ನಲ್ಲಿ ಶಾಂಘೈ ಸ್ಟಾಕ್ ಎಕ್ಸ್​ಚೇಂಜ್​ (ಎಸ್ಎಸ್ಇ) ಆಂಟ್ ಗ್ರೂಪ್​ನ ಐಪಿಒಗೆ ತಡೆಯೊಡ್ಡಿತು. ಈ ಹಠಾತ್ ಅಮಾನತಿಗೆ ನಿಯಂತ್ರಕ ಬದಲಾವಣೆಗಳು ಎಂದು ಉಲ್ಲೇಖಿಸಿದೆ. ಮಾ ಅವರ ನಿವ್ವಳ ಮೌಲ್ಯದಲ್ಲಿ 3 ಶತಕೋಟಿ ಡಾಲರ್​​ನಷ್ಟು ಸಂಪತ್ತು ಕಳೆದುಕೊಂಡರು. ಈ ಸುದ್ದಿಯ ನಂತರ ಅಲಿಬಾಬಾ ಷೇರುಗಳು ಹಾಂಗ್ ಕಾಂಗ್‌ನಲ್ಲಿ ಶೇ. 10ರಷ್ಟು ಕುಸಿದವು. ಅಂದಿನಿಂದ ಮಾ ಅವರ ಪತ್ತೆಯಾಗುತ್ತಿಲ್ಲ.

ಡಿಸೆಂಬರ್ 26ರಂದು ದೇಶದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ, ನಿಯಂತ್ರಕ ಮಾತುಕತೆಗಾಗಿ ಆಂಟ್ ಗ್ರೂಪ್​ಅನ್ನು ಕರೆಸಿಕೊಂಡಿತು. ಆಂಟ್​ ಸಮೂಹಕ್ಕೆ ಬ್ಯಾಂಕಿಂಗ್ ಪ್ರಾಧಿಕಾರವು ಐದು ಅಂಶಗಳ ಅನುಸರಣೆ ಕಾರ್ಯಸೂಚಿ ರೂಪಿಸಿದೆ. ಆಂಟ್​ ಗ್ರೂಪ್​​ ಪಾವತಿಗಳಲ್ಲಿ ತನ್ನ ಮೂಲ ವಹಿವಾಟಿಗೆ ಮರಳಬೇಕು ಮತ್ತು ಹೆಚ್ಚು ಪಾರದರ್ಶಕತೆ ತರಬೇಕು ಎಂದಿದೆ.

ABOUT THE AUTHOR

...view details