ಮುಂಬೈ: ಭಾರತೀಯ ಗ್ರಾಹಕ್ ಸರಕುಗಳ ದೈತ್ಯ ಐಟಿಸಿ, ಮಸಾಲೆ ತಯಾರಿಸುವ ಸನ್‌ರೈಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಎಫ್‌ಎಪಿಎಲ್) ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಕಂಪನಿ ಭಾನುವಾರ ಷೇರು ವಿನಿಮಯ ಕೇಂದ್ರಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.
ಸನ್‌ರೈಸ್ ಫುಡ್ಸ್ ಲಿಮಿಟೆಡ್ ಖರೀದಿಸಿದ ಐಟಿಸಿ - ಮಸಾಲೆ ವಹಿವಾಟು
70 ವರ್ಷಗಳಿಂದ ವಹಿವಾಟು ನಡೆಸುತ್ತಿರುವ ಸನ್‌ರೈಸ್, ಪೂರ್ವ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇದೆ. ಈ ಉದ್ದೇಶಿತ ಸ್ವಾಧೀನದಿಂದ ತನ್ನ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಳ್ಳಲಿದೆ ಎಂದು ಐಟಿಸಿ ತಿಳಿಸಿದೆ.
ಐಟಿಸಿ
ಮೇ 23ರಂದು ಕಂಪನಿಯು ಸನ್‌ರೈಸ್ ಎಂಬ ಟ್ರೇಡ್‌ಮಾರ್ಕ್ ಅಡಿ ಮಸಾಲೆ ವ್ಯವಹಾರದಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಸನ್‌ರೈಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಶೇ.100ರಷ್ಟು ಈಕ್ವಿಟಿ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲು ಷೇರು ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಕೋಲ್ಕತ್ತಾ ಮೂಲದ ಕಂಪನಿ ತಿಳಿಸಿದೆ.
ಖರೀದಿ ಪ್ರಕ್ರಿಯೆಯ ಒಟ್ಟಾರೆ ಮೊತ್ತದ ಮಾಹಿತಿಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಖರೀದಿ ಮೊತ್ತ 1,800 ಕೋಟಿಗಳಿಂದ 2,000 ಕೋಟಿ ರೂ.ಗಳಷ್ಟು ಇರಲಿದೆ ಎನ್ನಲಾಗುತ್ತಿದೆ.