ಕರ್ನಾಟಕ

karnataka

ETV Bharat / business

ಬಡವರ ರಕ್ಷಣೆಗೆ 'ಕೋವಿಡ್ ಆಕಸ್ಮಿಕ ನಿಧಿ' ಸ್ಥಾಪಿಸಿ 150 ಕೋಟಿ ರೂ. ಕೊಟ್ಟ ಐಟಿಸಿ ಕಂಪನಿ - ಕೋವಿಡ್ 19

ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಳಲುತ್ತಿರುವವರ ಮತ್ತು ಜೀವನೋಪಾಯಕ್ಕೂ ಪರದಾಡುತ್ತಿರುವ ಸಮಾಜದ ದುರ್ಬಲ ವರ್ಗದವರಿಗೆ ಸಹಾಯಕ್ಕೆ ಕೋವಿಡ್ ಆಕಸ್ಮಿಕ ನಿಧಿ ಸ್ಥಾಪಿಸಲಾಗಿದೆ. 150 ಕೋಟಿ ನಿಧಿಯನ್ನು ಅವರಿಗಾಗಿ ಬಳಸಿಕೊಳ್ಳಲಾಗುವುದು ಎಂದು ಐಟಿಸಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

Covid Contingency Fund
ಕೋವಿಡ್ ಆಕಸ್ಮಿಕ ನಿಧಿ

By

Published : Mar 27, 2020, 5:04 PM IST

ಕೋಲ್ಕತಾ:ಕೊರೊನಾ ವೈರಸ್​ನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಮಾಜದ ದುರ್ಬಲ ವರ್ಗದವರಿಗೆ ರಕ್ಷಣೆಗೆ ಐಟಿಸಿ 150 ಕೋಟಿ ರೂ.ಗಳ ಕೋವಿಡ್ ಆಕಸ್ಮಿಕ ನಿಧಿಯನ್ನು ಸ್ಥಾಪಿಸಿದೆ.

ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಳಲುತ್ತಿರುವವರ ಮತ್ತು ಜೀವನೋಪಾಯಕ್ಕೂ ಪರದಾಡುತ್ತಿರುವ ಸಮಾಜದ ದುರ್ಬಲ ವರ್ಗದವರಿಗೆ ಈ ನಿಧಿಯನ್ನು ಬಳಸಿಕೊಳ್ಳಲಾಗುವುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸಮಾಜದ ಕೆಳ ವರ್ಗಗಳಿಗೆ ತಲುಪುವ ಜಿಲ್ಲಾ ಆರೋಗ್ಯ ಮತ್ತು ಗ್ರಾಮೀಣ ಆರೋಗ್ಯ ಪರಿಸರ ವ್ಯವಸ್ಥೆಗೆ ನೆರವು ನೀಡಲು ಈ ನಿಧಿಯು ಜಿಲ್ಲಾ ಪ್ರಾಧಿಕಾರಗಳೊಂದಿಗೆ ಸಹಕರಿಸಲಿದೆ.

ಲಾಕ್​ಡೌನ್​ ಸಮಯದಲ್ಲಿ ದೇಶಾದ್ಯಂತ ಔಷಧಗಳು, ದಿನಸಿ ವಸ್ತುಗಳು, ಇತರ ಅಗತ್ಯ ಸರಕುಗಳು, ಕೃಷಿ ಉತ್ಪನ್ನಗಳನ್ನು ತಲುಪಿಸಲು ಶ್ರಮಿಸುತ್ತಿರುವವರ ಕಾರ್ಯ ಶ್ಲಾಘನೀಯ. ಜನರ ಯೋಗಕ್ಷೇಮಕ್ಕೆ ಈ ನಿಧಿಯ ಅಡಿಯಲ್ಲಿ ಸಂಪನ್ಮೂಲಗಳನ್ನು ನೀಡಲಾಗುವುದು. ಸೋಂಕಿತರ ಚಿಕಿತ್ಸೆಯ ಮುಂಚೂಣಿಯಲ್ಲಿ ಇರುವವರಿಗೆ ವೈಯಕ್ತಿಕ ರಕ್ಷಣೆ ಹಾಗೂ ನೈರ್ಮಲ್ಯದ ಉತ್ಪನ್ನಗಳನ್ನು ಒದಗಿಸುತ್ತೇವೆ ಎಂದು ಹೇಳಿದೆ.

ಜಗತ್ತು ಮತ್ತು ಭಾರತ ಕೋವಿಡ್​19 ಸೋಂಕಿನ ಭೀತಿಯನ್ನು ಎದುರಿಸುತ್ತಿದೆ. ನಾವು ಈ ಪರಿಸ್ಥಿತಿಯ ಮಧ್ಯದಲ್ಲಿ ಸಿಲುಕಿದ್ದೇವೆ. ಕಾರ್ಪೊರೇಟ್ ನಾಗರಿಕರಾದ ನಾವು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಾವೂ ಅರ್ಥಪೂರ್ಣವಾದ ಬೆಂಬಲವ ನೀಡಬೇಕಿದೆ ಎಂದು ಐಟಿಸಿ ಹೇಳಿದೆ.

ABOUT THE AUTHOR

...view details