ರೋಮ್ :ತನ್ನ ಐಫೋನ್‌ಗಳಿಗೆ ಸಂಬಂಧಿಸಿದಂತೆ 'ಆಕ್ರಮಣಕಾರಿ ಮತ್ತು ದಾರಿತಪ್ಪಿಸುವ' ವಾಣಿಜ್ಯ ಹವ್ಯಾಸಗಳಿಗೆ ಆ್ಯಪಲ್ಗೆ 10 ಮಿಲಿಯನ್ ಯುರೋಗಳಷ್ಟು (12 ಮಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ ಎಂದು ಇಟಲಿಯ ಆಂಟಿಟ್ರಸ್ಟ್ ಪ್ರಾಧಿಕಾರ ತಿಳಿಸಿದೆ.
ಹಲವು ಐಫೋನ್ ಮಾಡಲ್ಗಳು ನೀರು ನಿರೋಧಕವಾಗಿದೆ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿದೆ. ಅದು ಕೆಲವು ಸಂದರ್ಭಗಳಲ್ಲಿ ಮಾತ್ರ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ ಎಂದು ಫೈಲಿಂಗ್ನಲ್ಲಿ ಆಂಟಿಟ್ರಸ್ಟ್ ಪ್ರಾಧಿಕಾರ ತಿಳಿಸಿದೆ.