ನವದೆಹಲಿ:ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ರಿವಾರ್ಡ್ ಪಾಯಿಂಟ್ ಬಳಸಿಕೊಂಡು ಉಚಿತ ರೈಲು ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ನೀಡುತ್ತಿದೆ.
ಈ ಕಾರ್ಡ್ ಇದ್ದರೆ ಸಾಕು, ರೈಲ್ವೆ ಟಿಕೆಟ್ ಬುಕ್ಕಿಂಗ್ಗೆ ಯಾವುದೇ ಶುಲ್ಕವಿಲ್ಲ! - ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಫೀಚರ್
ಮೋದಿ ಸರ್ಕಾರದ ಆತ್ಮನಿರ್ಭಾರ ಭಾರತ, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಪರ್ಕವಿಲ್ಲದ ಕ್ರೆಡಿಟ್ ಕಾರ್ಡ್- ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಅನ್ನು ಎಸ್‌ಬಿಐ, ಐಆರ್‌ಸಿಟಿಸಿ ಮತ್ತು ಎನ್‌ಪಿಸಿಐ ಕೆಲವು ತಿಂಗಳ ಹಿಂದೆ ಉಚಿತ ರೈಲು ಟಿಕೆಟ್ ಕಾಯ್ದಿರಿಸುವ ಯೋಜನೆ ಪರಿಚಯಿಸಿತು.
ಮೋದಿ ಸರ್ಕಾರದ ಆತ್ಮನಿರ್ಭಾರ ಭಾರತ, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಪರ್ಕವಿಲ್ಲದ ಕ್ರೆಡಿಟ್ ಕಾರ್ಡ್- ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಕೆಲವು ತಿಂಗಳ ಹಿಂದೆ ಈ ಯೋಜನೆ ಆರಂಭಿಸಿದೆ.
ಹೊಸ ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಹೆಚ್ಚು ಅನುಕೂಲಕರವಾಗಿದ್ದು, ವೇಗ ಮತ್ತು ಸುರಕ್ಷಿತವಾಗಿದೆ. ನಿಯರ್ ಫೀಲ್ಡ್ ಕಮ್ಯುನಿಕೇಷನ್ ತಂತ್ರಜ್ಞಾನ ಸಹ ಹೊಂದಿದೆ. ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ನ ವಿಶೇಷ ವೈಶಿಷ್ಟ್ಯಗಳು ಹೀಗಿವೆ:
- 2021ರ ಮಾರ್ಚ್ 31ರವರೆಗೆ ಶುಲ್ಕವಿಲ್ಲ
- ಐಆರ್‌ಸಿಟಿಸಿ ವೆಬ್ ಪೋರ್ಟಲ್ ಮೂಲಕ ಟಿಕೆಟ್ ಬುಕ್ ಮಾಡಿದರೇ ರಿವಾರ್ಡ್ (1 ರಿವಾರ್ಡ್ ಪಾಯಿಂಟ್ = ರೂಪಾಯಿ 1) ಅಂಕ ಸಿಗುತ್ತದೆ. ಗರಿಷ್ಠ ಶೇ 10ರಷ್ಟು ಹಿಮ್ಮುಖ ಕೊಡುಗೆ ಲಭ್ಯವಿದೆ
- ಬಳಕೆದಾರರು ಉಚಿತ ರೈಲು ಟಿಕೆಟ್‌ಗೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಶಿಫಾರಸು ಮಾಡಿದರೂ ಅಂಕಗಳು ಸಿಗುತ್ತವೆ
- ಮೊದಲ 45 ದಿನಗಳಲ್ಲಿ 500 ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ ಬಳಕೆದಾರರು 350 ಬೋನಸ್ ರಿವಾರ್ಡ್ ಪಾಯಿಂಟ್‌ಪಡೆಯಬಹುದು
- ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ರೈಲು ಟಿಕೆಟ್ ಬುಕ್ಕಿಂಗ್‌ನಲ್ಲಿ ಶೇ 1ರಷ್ಟು ವಹಿವಾಟು ಶುಲ್ಕ ಮನ್ನಾ
- ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಶೇ 1ರಷ್ಟು ಇಂಧನ ಮೇಲಿನ ಹೆಚ್ಚುವರಿ ಶುಲ್ಕ ಮನ್ನಾ
- ಸಂಪರ್ಕರಹಿತ ಮತ್ತು ಆನ್‌ಲೈನ್ ವಹಿವಾಟುಗಳಿಗೆ ಎನ್‌ಸಿಎಂಸಿ ಅನ್ನು ಮೆಟ್ರೋ, ಟೋಲ್, ಪ್ಲಾಟ್‌ಫಾರ್ಮ್ ಟಿಕೆಟ್ ಸೇರಿದಂತೆ ಇತರೆ ಸೇವೆಗಳನ್ನು ಪರಿಚಯಿಸಲಾಗುತ್ತದೆ.
- ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಆನ್‌ಲೈನ್ ಶಾಪರ್‌ಗಳಿಗೆ ವಿವಿಧ ಪ್ರಯೋಜನಗಳನ್ನು ಸಹ ಪಡೆಯಬಹುದು