ಮುಂಬೈ:ಭಾರತದಲ್ಲಿ ಮಾರಾಟ ವಿಸ್ತರಿಸುವ ಉದ್ದೇಶದಿಂದ ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಐಫೋನ್ 10ಆರ್ ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆ ಮಾಡಿದ ಎಂದು ಮೂಲಗಳು ತಿಳಿಸಿವೆ.
ಐಫೋನ್ ಖರೀದಿಗೆ ಬಂತು ಒಳ್ಳೆ ಟೈಂ... ದುಬಾರಿ ಮೊಬೈಲ್ ದರದಲ್ಲಿ ಭಾರಿ ಇಳಿಕೆ
64 ಜಿಬಿ ಸಾಮರ್ಥ್ಯದ ಐಫೋನ್ 10ಆರ್ ಬೆಲಯನ್ನು ₹ 17,900ರಷ್ಟು ಕಡಿಮೆ ಮಾಡಲಾಗಿದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಕ್ಯಾಷ್ಬ್ಯಾಕ್ ಸಹ ಸಿಗಲಿದೆ. ಬೇಡಿಕೆಯನ್ನು ಆಧರಿಸಿ ಬೇರೆ ಸಾಧನಗಳ ಬೆಲೆಯಲ್ಲಿಯೂ ಬದಲಾವಣೆ ಮಾಡಲು ಕಂಪನಿ ಮುಂದಾಗಿದೆ.
ಕಂಪನಿಯು ಭಾರತದ ಜಾಲತಾಣದಲ್ಲಿ ಬೆಲೆಯಲ್ಲಿ ಯಾವುದೇ ಬದಲಾಬಣೆ ಆಗಿಲ್ಲ. ಆದರೆ, ಮಳಿಗೆಗಳಲ್ಲಿ ₹ 59 ಸಾವಿರಕ್ಕಿಂತ ಕಡಿಮೆ ಬೆಲಗೆ ಸಿಗುತ್ತದೆ ಎಂದು ಗ್ರಾಹಕರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಹೇಳಿಕೊಂಡಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ₹ 69,999ರಲ್ಲಿ ಮಾರಾಟ ಆಗುತ್ತಿದೆ.
ಕೆಲವು ಮಳಿಗೆಗಳಲ್ಲಿ ಸೀಮಿತ ಅವಧಿಯ ಕೊಡುಗೆ ಮೂಲಕ ಗ್ರಾಹಕರನ್ನು ಸೇಳೆಯುತ್ತಿವೆ. ಎಚ್ಡಿಎಫ್ಸಿಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ದಾರರು ಐಫೋನ್ ಎಕ್ಸ್ಆರ್ ಖರೀದಿಯ ಮೇಲೆ ಶೇ 10ರಷ್ಟು ಕ್ಯಾಶ್ಬ್ಯಾಕ್ ಪಡೆಯಲಿದ್ದಾರೆ. ಈ ಶ್ರೇಣಿಯಡಿ ಮೂರು ಮಾದರಿ ಫೋನ್ಗಳು ಮಾರಾಟ ಆಗುತ್ತಿವೆ.
ಐಫೋನ್ ಮಾದರಿ | ದರ (ಎಂಆರ್ಪಿ) | ಎಚ್ಡಿಎಫ್ಸಿ ರಹಿತ | ಎಚ್ಡಿಎಫ್ಸಿ ಗ್ರಾಹಕ |
ಐಫೋನ್ ಎಕ್ಸ್ಆರ್ 64ಜಿಬಿ | ₹ 76,900 | ₹ 59,900 | ₹ 53,900 |
ಐಫೋನ್ ಎಕ್ಸ್ಆರ್ 128ಜಿಬಿ | ₹ 81,900 | ₹ 64,900 | ₹ 58,400 |
ಐಫೋನ್ ಎಕ್ಸ್ಆರ್ 256ಜಿಬಿ | ₹ 91,900 | ₹ 74,900 | ₹ 67,400 |