ನವದೆಹಲಿ:ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಹೊಸ ಐಒಎಸ್ 14 ಮತ್ತು ಐಪ್ಯಾಡ್ ಒಎಸ್ 14 ನಲ್ಲಿ ಡಿಫಾಲ್ಟ್ ಇ-ಮೈಲ್ ಮತ್ತು ಬ್ರೌಸರ್ ಅಪ್ಲಿಕೇಶನ್‌ಗಳನ್ನು ಬದಲಾಯಿಸಲು ಆ್ಯಪಲ್ ಹೊಸ ಫೀಚರ್ ಪರಿಚಯಿಸಲಿದೆ.
ಐಒಎಸ್, ಐಪ್ಯಾಡ್ ಒಎಸ್ ಬಳಕೆದಾರರಿಗೆ ಹೊಸ ಫೀಚರ್ ಪರಿಚಯಿಸಲಿದೆ ಆ್ಯಪಲ್ - ಹೊಸ ಫೀಚರ್ ಪರಿಚಯಿಸಲಿದೆ ಆ್ಯಪಲ್
ಐಫೋನ್, ಐಪ್ಯಾಡ್ ಬಳಕೆದಾರರಿಗೆ ನೂತನ ಫೀಚರ್ ಅನ್ನು ಆ್ಯಪಲ್ ಪರಿಚಯಿಸಲಿದ್ದು, ಐಒಎಸ್ 14 ಮತ್ತು ಐಪ್ಯಾಡ್ ಒಎಸ್ 14 ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.
ಹೊಸ ಫೀಚರ್ ಪರಿಚಯಿಸಲಿದೆ ಆ್ಯಪಲ್
ಇನ್ನು ಬದಲಾವಣೆಯ ಬಗ್ಗೆ ಕಂಪನಿ ವಿವರ ನೀಡಿಲ್ಲ. ನೂತನ ಫೀಚರ್ ಅಪ್ಡೇಟ್ ಆದರೆ, ಹೊಸ ಇ-ಮೈಲ್ ರಚಿಸುವಾಗ ಅಥವಾ ಲಿಂಕ್ ಕ್ಲಿಕ್ ಮಾಡಿದಾಗ ಡಿಫಾಲ್ಟ್ ವೆಬ್ ಬ್ರೌಸರ್ ಮತ್ತು ಇ -ಮೈಲ್ ಅಪ್ಲಿಕೇಶನ್ ಹೊಂದಿಸಲು(ಸೆಟ್ ಮಾಡಲು) ಪ್ರಿ-ವೀವ್ ಪೇಜ್ ಆಯ್ಕೆಯಾಗಿ ಬರಲಿದೆ.
ಹೊಸ ಫೀಚರ್ ಇನ್ನೂ ಅಪ್ಡೇಟ್ ಮಾಡಲಾಗಿಲ್ಲ. ಡೆವಲಪರ್ಗಳು ಇದರ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೊಬೈಲ್ ಕಂಪನಿ ದಿ ವರ್ಜ್ ಹೇಳಿದೆ.