ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣದ ಅಕ್ರಮ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಅಕ್ಟೋಬರ್ 30ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಇರಿಸಿಕೊಳ್ಳುವಂತೆ ಆದೇಶಿಸಿದೆ.
ದೀಪಾವಳಿ ಹಬ್ಬಕ್ಕೆ 'ಡಿಕೆಶಿ'ಗೆ ಸಿಕ್ಕ ಜಾಮೀ(ಮೂ)ನು ಭಾಗ್ಯ ಚಿದಂಬರಂಗೆ ಸಿಗಲಿಲ್ಲ..!
ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈ ಕೋರ್ಟ್ ನಿನ್ನೆ (ಬುಧವಾರ) ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ತಮಗೂ ಕೂಡ ನ್ಯಾಯಾಲಯದ ಜಾಮೀನು ಭಾಗ್ಯ ಕರುಣಿಸಲಿದೆ ಎಂಬ ನಿರೀಕ್ಷೆಯಲ್ಲಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಇದ್ದರು. ಆದ್ರೆ, ನ್ಯಾಯಾಲಯ ಅಕ್ಟೋಬರ್ 30ರವರೆಗೆ ಜಾರಿ ನಿರ್ದೇಶನಾಲಯಕ್ಕೆ ತನ್ನ ವಶದಲ್ಲಿ ಇರಿಸಿಕೊಳ್ಳುವಂತೆ ಆದೇಶಿಸಿದೆ.
ಸಾಂದರ್ಭಿಕ ಚಿತ್ರ
ಈಚೆಗೆ ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿ ಇಡಿಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ತಮ್ಮಗೂ ಕೋರ್ಟ್ ಇಂತಹದ್ದೇ ಸಿಹಿ ಸುದ್ದಿ ನೀಡಿಲಿದೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದ ಚಿದಂಬರಂ ಅವರಿಗೆ ನಿರಾಸೆ ಆಗಿದೆ.
ವಿಶೇಷ ನ್ಯಾಯಮೂರ್ತಿ ಅಜಯ್ ಕುಮಾರ್ ಕುಹಾರ್ ಅವರು ಚಿದಂಬರಂ ಅವರನ್ನು ಇಡಿ ಪ್ರಶ್ನಿಸುವ ಅವಕಾಶ ನೀಡಿದ್ದಾರೆ. ಏನಾದರೂ ಆರೋಗ್ಯ ಸಂಬಂಧಿತ ತೊಂದರೆಗಳಿದ್ದಲ್ಲಿ ಕೂಡಲೇ ಅವರನ್ನು ಏಮ್ಸ್ಗೆ ಕರೆದೊಯ್ಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.