ಬೆಂಗಳೂರು:ಇನ್ಫೋಸಿಸ್ ಬರುವ ವರ್ಷದಲ್ಲಿ 10,000 ಹುದ್ದೆಗಳನ್ನು ಕಡಿತಗೊಳಿಸಲಿದೆ ಎಂಬ ವದಂತಿಯ ನಡುವೆಯೇ ಶಿಕ್ಷಣ ಮುಗಿಸಿ ವೃತ್ತಿಗೆ ಅಣಿಯಾಗುತ್ತಿರುವ ಫ್ರೆಶರ್ಗೆ ಸಿಹಿ ಸುದ್ದಿ ನೀಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಐಟಿ ವಲಯದ ಇನ್ಫೋಸಿಸ್ ತನ್ನ ವೆಚ್ಚವನ್ನು 100 ರಿಂದ 150 ಮಿಲಿಯನ್ ಡಾಲರ್ನಷ್ಟು ಕಡಿತಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಹೀಗಾಗಿ, ನೌಕರರ ವೆಚ್ಚ ಕಡಿಮೆ ಮಾಡಲು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಕಂಪನಿಯು ತನ್ನ ಉನ್ನತ ಮಟ್ಟದ ಕಾರ್ಯನಿರ್ವಾಹಕ ವಿಶ್ಲೇಷಕರ ಸಭೆಯಲ್ಲಿ ಹೇಳಿದೆ ಎನ್ನಲಾಗುತ್ತಿದೆ.
ಸಿಇಒ ಸಲೀಲ್ ಪರೇಖ್ ಅಡಿ ಕಂಪನಿ ಗಮನಾರ್ಹವಾಗಿ ಕುಸಿತ ಕಂಡಿದೆ. ಈ ಬೆಳವಣಿಗೆ ಹೆಚ್ಚಿಸಲು ಹೂಡಿಕೆ ಹೆಚ್ಚಿಸಲಾಗಿದೆ. ಈ ನಡುವೆ ಕಂಪನಿಯು ಹೆಚ್ಚಿನ ವೆಚ್ಚದ ಉಳಿತಾಯದತ್ತ ಮೊರೆ ಹೋಗುತ್ತಿದೆ ಎನ್ನಲಾಗುತ್ತಿದೆ.
ವೆಚ್ಚ ಕಡಿತಗೊಳಿಸಬಹುದಾದ 21 ಅಂಶಗಳನ್ನು ಗುರುತಿಸಿದ್ದೇವೆ. ಈ ವರ್ಷ್ಯಾಂತ್ಯಕ್ಕೆ 100- 150 ಮಿಲಿಯನ್ ಡಾಲರ್ ವೆಚ್ಚ ಉಳಿತಾಯದ ಗುರಿ ಇರಿಸಿಕೊಂಡಿದ್ದೇವೆ. ಹೆಚ್ಚು-ಹೆಚ್ಚು ಫ್ರೆಷರ್‌ಗಳನ್ನು ನೇಮಿಸಿಕೊಳ್ಳುವ ಮೂಲಕ ಬ್ಯಾರೆಲ್ ಆಕಾರದಲ್ಲಿರುವ ಪಿರಮಿಡ್ ನಿರ್ವಹಣೆ ಚಾರ್ಟ್ನ (ಬಾಟಮ್) ಕೆಳ ಹಂತದಲ್ಲಿ ಸುಧಾರಣೆ ತರುವತ್ತ ಸಂಸ್ಥೆ ಗಮನಹರಿಸಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ನೀಲಂಜನ್ ರಾಯ್ ಹೇಳಿದ್ದಾರೆ.