ಕರ್ನಾಟಕ

karnataka

ETV Bharat / business

ಅಮೆರಿಕದ ಬ್ಲೂ ಆಕ್ರಾನ್ ಐಸಿಐ ಕಂಪನಿ ಖರೀದಿಸಿದ ಐಟಿ ದೈತ್ಯ ಇನ್ಫೋಸಿಸ್​ - ಇನ್ಫೋಸಿಸ್​

ಇನ್ಫೋಸಿಸ್​​ನ ಅನಾಲಿಟಿಕ್​ ಕಂಪನಿ ಬ್ಲೂ ಆಕ್ರಾನ್ ಐಸಿಐ ಸ್ವಾಧೀನ ಕ್ರಮವು ಗ್ರಾಹಕ ಅನುಭವದ ಕೊಡುಗೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಗ್ರಾಹಕರಿಗೆ ತಮ್ಮ ಡಿಜಿಟಲ್ ರೂಪಾಂತರ ಪ್ರಯಾಣವನ್ನು ನ್ಯಾವಿಗೇಟ್ ಮಾಡಲು ನೆರವಾಗಲಿದೆ. ಕಂಪನಿಯು ತನ್ನ ನಿರಂತರ ಬದ್ಧತೆ ಮುಂದುವರಿಸುತ್ತದೆ ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

Infosys
ಇನ್ಫೋಸಿಸ್​

By

Published : Oct 8, 2020, 4:06 PM IST

ಬೆಂಗಳೂರು: ದೇಶದ ಐಟಿ ದೈತ್ಯ ಇನ್ಫೋಸಿಸ್ ಅಮೆರಿಕ ಮೂಲದ ಅನಾಲಿಟಿಕ್​ ಕಂಪನಿ ಬ್ಲೂ ಆಕ್ರಾನ್ ಐಸಿಐ ಅನ್ನು 125 ಮಿಲಿಯನ್ ಡಾಲರ್​ಗೆ ಸ್ವಾಧೀನಪಡಿಸಿಕೊಳ್ಳಲಿದೆ.

ಇನ್ಫೋಸಿಸ್ ಈ ಕ್ರಮವು ಗ್ರಾಹಕ ಅನುಭವದ ಕೊಡುಗೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಗ್ರಾಹಕರಿಗೆ ತಮ್ಮ ಡಿಜಿಟಲ್ ರೂಪಾಂತರ ಪ್ರಯಾಣವನ್ನು ನ್ಯಾವಿಗೇಟ್ ಮಾಡಲು ನೆರವಾಗಲಿದೆ. ಕಂಪನಿಯು ತನ್ನ ನಿರಂತರ ಬದ್ಧತೆ ಮುಂದುವರಿಸುತ್ತದೆ ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

ಗ್ರಾಹಕರ ಅನುಭವ, ಡಿಜಿಟಲ್ ವಾಣಿಜ್ಯ, ವಿಶ್ಲೇಷಣೆ ಮತ್ತು ಅನುಭವ ಚಾಲಿತ ವಾಣಿಜ್ಯ ಸೇವೆಗಳ ಮೂಲಕ ಬ್ಲೂ ಆಕ್ರಾನ್ ಐಸಿ ಇನ್ಫೋಸಿಸ್‌ಗೆ ಗಮನಾರ್ಹವಾದ ಟೆಕ್ನಾಲಜಿ ಸಾಮರ್ಥ್ಯಗಳನ್ನು ತಂದುಕೊಡಲಿದೆ. ನಿರ್ವಹಣಾ ಪ್ರೋತ್ಸಾಹ ಮತ್ತು ಬೋನಸ್ ಸೇರಿದಂತೆ ಸ್ವಾಧೀನದ ವೆಚ್ಚವು 125 ಮಿಲಿಯನ್ ಡಾಲರ್​ವರೆಗೆ ಇರುತ್ತದೆ ಎಂದು ತಿಳಿಸಿದೆ.

ವಾಡಿಕೆಯಂತೆ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟು ಸ್ವಾಧೀನವು 2021ರ ಮೂರನೇ ತ್ರೈಮಾಸಿಕದಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ.

ನಮ್ಮ ಗ್ರಾಹಕರ ಡಿಜಿಟಲ್ ಆದ್ಯತೆಗಳಿಗೆ ಸಂಬಂಧಿಸಿದ ಸಾಮರ್ಥ್ಯಗಳನ್ನು ನಿರ್ಮಿಸುವ ಇನ್ಫೋಸಿಸ್ ಪ್ರಯಾಣದ ಮತ್ತೊಂದು ಪ್ರಮುಖ ಮೈಲಿಗಲ್ಲು ಬ್ಲೂ ಆಕ್ರಾನ್ ಐಸಿ ಸ್ವಾಧೀನ. ಅಡೋಬ್ ಪರಿಸರ ವ್ಯವಸ್ಥೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ. ಬ್ಲೂ ಆಕ್ರಾನ್ ಐಸಿ ಮತ್ತು ಅದರ ನಾಯಕತ್ವದ ತಂಡವನ್ನು ಇನ್ಫೋಸಿಸ್ ಕುಟುಂಬಕ್ಕೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಇನ್ಫೋಸಿಸ್ ಅಧ್ಯಕ್ಷ ಎಸ್​. ರವಿ ಕುಮಾರ್ ಹೇಳಿದರು.

ABOUT THE AUTHOR

...view details