ಕರ್ನಾಟಕ

karnataka

By

Published : Oct 22, 2019, 6:56 PM IST

Updated : Oct 22, 2019, 7:06 PM IST

ETV Bharat / business

ಇನ್ಫೋಸಿಸ್​ ಸಿಇಒ ವಿರುದ್ಧ ಅನಾಮಧೇಯ ಪತ್ರ: ಆಡಿಟ್​ ಸಮಿತಿ ತನಿಖೆಗೆ ಆದೇಶಿಸಿದ ನಿಲಕೇಣಿ

ಅಮೆರಿಕದ ಷೇರುಪೇಟೆ ಸೆಕ್ಯುರೀಟ್ ಕೇಂದ್ರಕ್ಕೆ ಇನ್ಫೋಸಿಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಹಣಕಾಸು ಅಧಿಕಾರಿ ವಿರುದ್ಧ ನೈತಿಕವಲ್ಲದ ವಹಿವಾಟು ಆರೋಪದ ಪತ್ರವನ್ನು ಅನಾಮಿಕ ವ್ಯಕ್ತಿ ಒಬ್ಬರು ಬರೆದಿದ್ದಾರೆ. ಗಂಭೀರವಾಗಿ ತೆಗೆದುಕೊಂಡಿರುವ ಸಂಸ್ಥೆ, ಸಿಇಒ ಮತ್ತು ಸಿಎಫ್​ಒ ವಿರುದ್ಧ ಸ್ವತಂತ್ರ ತನಿಖೆಗೆ ಆದೇಶಿಸಲಾಗುವುದು ಎಂದು ಕಂಪನಿ ಆಶ್ವಾಸ ನೀಡಿದೆ.

ಸಾಂದರ್ಭಿಕ ಚಿತ್ರ

ಮುಂಬೈ:ಇನ್ಫೋಸಿಸ್ ಸಂಸ್ಥೆಯ ವಿರುದ್ಧ ಕೇಳಿ ಬಂದಿರುವ ಆರೋಪಿತ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಸ್ಥೆ, ಸಿಇಒ ಮತ್ತು ಸಿಎಫ್​ಒ ವಿರುದ್ಧ ಸ್ವತಂತ್ರ ತನಿಖೆಗೆ ಆದೇಶಿಸಲಾಗುವುದು ಎಂದು ಕಂಪನಿ ಆಶ್ವಾಸ ನೀಡಿದೆ.

ಅಮೆರಿಕದ ಷೇರುಪೇಟೆ ಸೆಕ್ಯುರಿಟಿಸ್​ ಕೇಂದ್ರಕ್ಕೆ ಇನ್ಫೋಸಿಸ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಹಣಕಾಸು ಅಧಿಕಾರಿ ವಿರುದ್ಧ ನೈತಿಕವಲ್ಲದ ವಹಿವಾಟು ಆರೋಪದ ಪತ್ರವನ್ನು ಅನಾಮಿಕ ವ್ಯಕ್ತಿ ಒಬ್ಬರು ಬರೆದಿದ್ದಾರೆ.

ಈ ಆರೋಪದ ಬಗ್ಗೆ ಮಾತನಾಡಿದ ಇನ್ಫೋಸಿಸ್​​ನ ನಂದನ್ ನಿಲಕೇಣಿ, ಸಂಸ್ಥೆಯ ಸಿಇಒ ಸಲಿಲ್​ ಪರೇಖ್​ ಅವರು ಅಂತಾರಾಷ್ಟ್ರೀಯ ಪ್ರವಾಸ, ಮುಂಬೈ, ಅಮೆರಿಕ ಪ್ರಯಾಣದ ಬಗ್ಗೆಯೂ ದೂರುಗಳು ಕೇಳಿಬಂದಿವೆ. ಶಾರ್ದುಲ್​ ಅಮರಚಂದ್​ ಮಂಗಳ್ ದಾಸ್ ಲೆಕ್ಕಶೋಧನ ಸಮಿತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸಲಾಗುತ್ತಿದೆ. ತನಿಖೆಯ ವರದಿ ಬರುವ ತನಕ ಕಾಯಬೇಕಿದೆ ಎಂದು ಹೇಳಿದರು.

ಸಂಸ್ಥೆಯ ಲೆಕ್ಕಶೋಧನಾ ಸಮಿತಿ ಮುಂದೆ 2019ರ ಅಕ್ಟೋಬರ್​ 10ರಂದು ಹಾಗೂ ಕಾರ್ಯನಿರ್ವಾಹಕೇತರ ಸದಸ್ಯರ ಸಮಿತಿ ಮುಂದೆ 2019ರ ಅಕ್ಟೋಬರ್​ 11ರಂದು ಎರಡು ಅನಾಮದೇಯ ದೂರುಗಳು ಬಂದಿವೆ. ಈ ಬಗ್ಗೆ ಕುಲಂಕಷವಾಗಿ ಪರಿಶೀಲನೆ ನಡೆಸಿ, ಆಂತರಿಕ ತನಿಖೆ ಶುರುವಾಗಿದೆ ಎಂದು ಹೇಳಿದರು.

Last Updated : Oct 22, 2019, 7:06 PM IST

ABOUT THE AUTHOR

...view details