ಕರ್ನಾಟಕ

karnataka

ETV Bharat / business

ಇನ್ಫಿ ತ್ರೈಮಾಸಿಕ: ₹ 4 ಸಾವಿರ ಕೋಟಿ ಲಾಭ, ಹೂಡಿಕೆದಾರರಿಗೆ ಸಿಹಿ! - undefined

ಹೂಡಿಕೆದಾರರ ಪ್ರತಿ ಷೇರಿಗೆ ₹ 10.50 ಲಾಭಾಂಶ ನೀಡಲು ಇನ್ಫೋಸಿಸ್‌ ಸಂಸ್ಥೆಯ ನಿರ್ದೇಶಕರ ಮಂಡಳಿ ಸಮ್ಮತಿಸಿದೆ.

ಇನ್ಫೋಸಿಸ್​: ಸಂಗ್ರಹ ಚಿತ್ರ

By

Published : Apr 12, 2019, 8:47 PM IST

ಬೆಂಗಳೂರು:ದೇಶದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್​ ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕದಲ್ಲಿ ಒಟ್ಟು ₹ 4,074 ಕೋಟಿ ನಿವ್ವಳ ಲಾಭ ದಾಖಲಿಸಿದೆ.

ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆಗೆ (ಸೆಬಿ) ಶುಕ್ರವಾರ ಸಲ್ಲಿಸಿರುವ ಮಾಹಿತಿಯ ಅನ್ವಯ, 2018ರ ಅಕ್ಟೋಬರ್​-ಡಿಸೆಂಬರ್​ ತ್ರೈಮಾಸಿಕದಲ್ಲಿದ್ದ ₹ 3,609 ಕೋಟಿ ರೂ ನಿವ್ವಳ ಲಾಭದಲ್ಲಿ ಶೇ 13ರಷ್ಟು ಹೆಚ್ಚಳವಾಗಿ ಲಾಭದ ಮೊತ್ತ ₹ 4,074 ಕೋಟಿಗೆ ತಲುಪಿದೆ ಎಂದು ಇನ್ಫೋಸಿಸ್ ತಿಳಿಸಿದೆ.

2018-19ನೇ ಸಾಲಿನ ವಿತ್ತೀಯ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇನ್ಫೊಸಿಸ್​ಗೆ ₹ 21,539 ಕೋಟಿ ಆದಾಯ ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ ₹ 21,400 ಕೋಟಿ ಲಾಭಾಂಶ ಇರುವುದಾಗಿ ಸಂಸ್ಥೆ ಹೇಳಿಕೊಂಡಿತ್ತು. ಇದಕ್ಕೆ ಹೋಲಿಸಿದಾಗ ಅದರ ಆದಾಯ ಹರಿವಿನಲ್ಲಿ ಶೇ 0.65 ಏರಿಕೆ ಆಗಿದೆ.

ಇನ್ಫೋಸಿಸ್ ಸಿಇಒ/ಎಂಡಿ ಸಲಿಲ್ ಎಸ್. ಪರೇಖ್, ನಮ್ಮ ಮೊದಲ ವರ್ಷದ ಪಯಾಣವು ಆದಾಯದ ಬೆಳವಣಿಗೆಯೊಂದಿಗೆ ಪೂರ್ಣಗೊಡಿದೆ. ಡಿಜಿಟಲ್ ಬಂಡವಾಳದ ಕಾರ್ಯಕ್ಷಮತೆ, ಬೃಹತ್‌ ಗಾತ್ರದ ಒಪ್ಪಂದಗಳಲ್ಲಾದ ಗೆಲುವು, ಸ್ಥಾನಿಕ ಮತ್ತು ದೀರ್ಘಕಾಲಿಕ ಗ್ರಾಹಕ ಸಂಬಂಧಗಳ ವಹಿವಾಟಿಗೆ ನೀಡಿದ ಗಮನದಿಂದ ಈ ಸಾಧನೆ ಸಾಧ್ಯವಾಗಿದೆ. 2020ರ ಆರ್ಥಿಕ ವರ್ಷದಲ್ಲಿ ಇದೇ ಮಾರ್ಗದಲ್ಲಿ ಸಾಗಲಿದ್ದೇವೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details