ಬೆಂಗಳೂರು: ಸಿಲಿಕಾನ್ ಸಿಟಿಯ ಜಾಗತಿಕ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್, 2019-20ರ ಮೂರನೇ ತ್ರೈಮಾಸಿಕದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 4,466 ಕೋಟಿ ರೂ.ಯಷ್ಟು ನಿವ್ವಳ ಲಾಭ ಗಳಿಸಿದೆ.
ಡಿಸೆಂಬರ್ ತ್ರೈಮಾಸಿಕದಲ್ಲಿ ₹ 4,466 ಕೋಟಿ ಲಾಭಗಳಿಸಿದ ಇನ್ಫೋಸಿಸ್
ಡಿಸೆಂಬರ್ 31ರವರೆಗೆ 3 ತಿಂಗಳಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ 23.7ರಷ್ಟು ಏರಿಕೆಯಾಗಿ ₹ 4,466 ಕೋಟಿ ಆದಾಯ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 3,610 ಕೋಟಿ ಗಳಿಕೆ ಕಂಡಿತ್ತು. ಆದಾಯ ಪ್ರಮಾಣ ಶೇ 7.9ರಷ್ಟು ಹೆಚ್ಚಳದೊಂದಿಗೆ ₹ 23,092 ಕೋಟಿ ಆಗಿದೆ. 2019ರ ಇದೇ ಅವಧಿಯಲ್ಲಿ ₹ 21,400 ಕೋಟಿ ಆದಾಯ ಗಳಿಸಿತ್ತು.
ನಿವ್ವಳ ಲಾಭವು ಮೂರನೇ ತ್ರೈಮಾಸಿಕದಲ್ಲಿ ಶೇ10.6 ರಷ್ಟು ಏರಿಕೆ ಕಂಡು 4,466 ಕೋಟಿ ರೂ.ಗೆ ತಲುಪಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ₹ 4,036 ಕೋಟಿ ರೂ.ಯಷ್ಟು ಇತ್ತು. ಈ ಮೂಲಕ ಡಿಸೆಂಬರ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತಲೂ ಅಧಿಕ ಲಾಭ ಗಳಿಸಿದೆ.
ಡಿಸೆಂಬರ್ 31ರ ವರೆಗೆ 3 ತಿಂಗಳಲ್ಲಿ ಕಂಪನಿಯ ನಿವ್ವಳ ಲಾಭ ಶೇ 23.7ರಷ್ಟು ಏರಿಕೆಯಾಗಿ ₹ 4,466 ಕೋಟಿ ಆದಾಯ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 3,610 ಕೋಟಿ ಗಳಿಕೆ ಕಂಡಿತ್ತು. ಆದಾಯ ಪ್ರಮಾಣ ಶೇ 7.9ರಷ್ಟು ಹೆಚ್ಚಳದೊಂದಿಗೆ ₹ 23,092 ಕೋಟಿ ಆಗಿದೆ. 2019ರ ಇದೇ ಅವಧಿಯಲ್ಲಿ ₹ 21,400 ಕೋಟಿ ಆದಾಯ ಗಳಿಸಿತ್ತು.