ಕರ್ನಾಟಕ

karnataka

ETV Bharat / business

ಇನ್ಫೋಸಿಸ್​ ಖ್ಯಾತಿಗೆ ಕಪ್ಪು ಚುಕ್ಕೆಯಾದ ಅನಾಮಧೇಯ ಪತ್ರ... ಶೇ 16ರಷ್ಟು ಷೇರು ಬೆಲೆ ಕುಸಿತ

ಮಂಗಳವಾರದ ವಹಿವಾಟಿನಲ್ಲಿ ಇನ್ಫೋಸಿಸ್​ ಸಂಸ್ಥೆಯ ಷೇರು ಮೌಲ್ಯ ಶೇ 16ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಕುಸಿತವನ್ನು ಕಂಡಿರಲಿಲ್ಲ. 2013ರ ಏಪ್ರಿಲ್​ 12ರಂದು ಶೇ 22ರಷ್ಟು ಕುಸಿದಿತ್ತು. ಈ ಬಳಿಕ ಇದೇ ಮೊದಲ ಬಾರಿಗೆ ಅಂತಹ ಇಳಿಕೆ ದಾಖಲಿಸಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 22, 2019, 4:55 PM IST

Updated : Oct 22, 2019, 7:15 PM IST

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ಸಿಲಿಕಾನ್ ಸಿಟಿಯ ಇನ್ಫೋಸಿಸ್​ ಸಂಸ್ಥೆಯ ಸಿಇಒ ವಿರುದ್ಧ ಕೇಳಿ ಬಂದ ಅನಾಮಧೇಯ ಪತ್ರದ ದೂರಿನ ಪರಿಣಾಮ ಷೇರು ಮೌಲ್ಯದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಮಂಗಳವಾರದ ವಹಿವಾಟಿನಲ್ಲಿ ಇನ್ಫಿ ಸಂಸ್ಥೆಯ ಷೇರು ಮೌಲ್ಯ ಶೇ 16ರಷ್ಟು ಕುಸಿತ ಕಂಡಿದೆ. ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಕುಸಿತವನ್ನು ಕಂಡಿರಲಿಲ್ಲ. 2013ರ ಏಪ್ರಿಲ್​ 12ರಂದು ಶೇ 22ರಷ್ಟು ಕುಸಿದಿತ್ತು. ಈ ಬಳಿಕ ಇದೇ ಪ್ರಥಮ ಬಾರಿಗೆ ಅಂತಹ ಇಳಿಕೆ ದಾಖಲಿಸಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಇಂದಿನ ಮುಂಬೈ ಷೇರು ಸೂಚ್ಯಂಕದಲ್ಲಿ ಶೇ 16.21ರಷ್ಟು ಕುಸಿತ ಕಂಡು ₹ 643.50ರಲ್ಲಿ ವಹಿವಾಟು ನಡೆಸಿದೆ. ಎನ್ಎಸ್ಇಯಲ್ಲಿ ₹ 110.50 ಕಳೆದುಕೊಂಡು ಶೇ 14.33ರಷ್ಟು ಕುಸಿದು ₹ 657.85ಯಂತೆ ವ್ಯವಹಾರ ನಡೆಸಿತು.

ಸಂಸ್ಥೆಯ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಅದು ಸಂಸ್ಥೆಯ ಸಿಇಒ ಸಲೀಲ್​ ಪರೇಖ್​ ವಿರುದ್ಧ ದೂರ ಬಂದಿದೆ. ಪರೇಖ್​ ನೈತಿಕವಲ್ಲದ ಮಾರ್ಗದಿಂದ ವಹಿವಾಟು ನಡೆಸುತ್ತಿದ್ದಾರೆ. ಲಾಭದ ಸಂಖ್ಯೆ ಹಾಗೂ ಆದಾಯ ಪ್ರಮಾಣ ಹೆಚ್ಚಳವಾಗಿದೆ ಎಂಬುದನ್ನು ವಾಮಮಾರ್ಗದಿಂದ ತೋರಿಸಲಾಗಿದೆ ಎಂದು ಅಮೆರಿಕ ಷೇರುಪೇಟೆಯ ಸೆಕ್ಯುರಿಟೀಸ್​ಗೆ ನೀಡಿದ ದೂರಿನಲ್ಲಿ ದಾಖಲಾಗಿದೆ. ಇದರಿಂದ ಏಷ್ಯಾದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್​ಗೆ ಭಾರಿ ನಷ್ಟ ಉಂಟಾಗಿದೆ.

Last Updated : Oct 22, 2019, 7:15 PM IST

ABOUT THE AUTHOR

...view details