ಕರ್ನಾಟಕ

karnataka

ETV Bharat / business

ಇನ್ಫಿ ಸಿಇಒ ಸಲೀಲ್​ಗೆ ಕ್ಲೀನ್​ ಚಿಟ್​... ಹಣಕಾಸು ಅವ್ಯವಹರ ನಡೆದಿಲ್ಲ - ಇನ್ಫೋಸಿಸ್​ ವಿರುದ್ಧ ಅನಾಮಧೇಯ ದೂರು

ಇನ್ಪೋಸಿಸ್​ ಕಂಪನಿಯ ಸಿಇಒ ಸಲೀಲ್​ ಪಾರೇಖ್ ಅವರ ವಿರುದ್ಧ ಅನಾಮಧೇಯರು ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಕಂಪನಿಯ ನಿರ್ದೇಶಕ ಮಂಡಳಿಯ ಲೆಕ್ಕಪತ್ರ ಸಮಿತಿಯು ತನ್ನ ವರದಿಯನ್ನು ಬಹಿರಂಗಪಡಿಸಿದೆ.

Infosys
ಇನ್ಪೋಸಿಸ್

By

Published : Jan 11, 2020, 3:51 AM IST

ಬೆಂಗಳೂರು: ಇನ್ಪೋಸಿಸ್​ ಕಂಪನಿಯ ಸಿಇಒ ಸಲೀಲ್​ ಪಾರೇಖ್ ಅವರ ವಿರುದ್ಧ ಅನಾಮಧೇಯರು ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದ್ದರ ಕುರಿತು ಇನ್ಫಿ ಆಡಳಿತ ಮಂಡಳಿ ತನಿಖೆ ನಡೆಸಿ ತನ್ನ ವರದಿಯನ್ನುಅಂಶಗಳನ್ನು ಬಹಿರಂಗಪಡಿಸಿದೆ.

ಹಣಕಾಸು ಅವ್ಯವಹಾರ ಅಥವಾ ಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರಗಳಲ್ಲಿ ನ್ಯಾಯಬಾಹಿರವಾದ ವಿಧಾನಗಳನ್ನು ಅನುಸರಿಸಿದ್ದಾರೆ ಎಂಬುದಕ್ಕೆ ಯಾವುದೇ ವಿಧದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ನಿರ್ದೇಶಕ ಮಂಡಳಿಯ ಲೆಕ್ಕಪತ್ರ ಸಮಿತಿ ಹೇಳಿದೆ.

ಸಮಿತಿಯ ಈ ವರದಿಯಿಂದಾಗಿ ಕಂಪನಿಯ ಸಿಇಒ ಸಲೀಲ್​ ಪಾರೇಖ್​ ಅವರು ಈಗ ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿದ್ದಾರೆ.

ಅನಾಮಧೇಯರ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡ ನಿರ್ದೇಶಕ ಮಂಡಳಿಯು ಕಾನೂನು ಸಲಹಾ ಸಂಸ್ಥೆಗಳಾದ ಶಾರ್ದೂಲ್​ ಅಮರ್​ಚಂದ್​ ಮಂಗಲದಾಸ್​ ಆ್ಯಂಡ್ ಕಂಪನಿ ಮತ್ತು ಪ್ರೈಸ್ ವಾಟರ್​ಹೌಸ್​ ಕೂಪರ್ಸ್​ ಸಹಾಯ ಪಡೆದು ಸಮಗ್ರವಾಗಿ ತನಿಖೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ABOUT THE AUTHOR

...view details