ಕರ್ನಾಟಕ

karnataka

ETV Bharat / business

ದಿವಾಳಿಯತ್ತ 'ಜೆಟ್​ ಏರ್​ವೇಸ್' ಲಾಭದತ್ತ 'ಇಂಡಿಗೋ'..! - undefined

ವಾಯುಯಾನ ಉದ್ಯಮದಲ್ಲಿ ಇಂಡಿಗೋಗೆ ತೀವ್ರ ಪೈಪೋಟಿ ನೀಡುತ್ತಿದ್ದ ಜೆಟ್​, ಸಾಲದ ಕೂಪಕ್ಕೆ ಸಿಲುಕಿ ದಿವಾಳಿ ಅಂಚಿಗೆ ತಲುಪಿದೆ. ಇತ್ತ ಉದ್ಯಮದ ಮತ್ತೊಂದು ಅತಿದೊಡ್ಡ ವಾಹಕ ಸಂಸ್ಥೆಯಾದ ಇಂಡಿಗೋ, ಗರಿಷ್ಠ ಲಾಭದ ಮುಖೇನ ಮುಂದಿನ ದಿನಗಳಲ್ಲಿ ಏರ್​ ಟ್ರಾಫಿಕ್​ನಲ್ಲಿ ಪ್ರಮುಖ ಸಂಸ್ಥೆಯಾಗುವತ್ತ ದೃಷ್ಟಿ ಇರಿಸಿಕೊಂಡಿದೆ.

ವಾಯುಯಾನ ಮಾರುಕಟ್ಟೆ ಪಾಲು ಇನ್ಫೋಗ್ರಾಫಿಕ್​

By

Published : Apr 20, 2019, 5:17 PM IST

Updated : Apr 20, 2019, 5:28 PM IST

ಮುಂಬೈ: ಜೆಟ್​ ಏರ್​ವೇಸ್​ ಆರ್ಥಿಕ ಸಂಕಷ್ಟದಿಂದ ತನ್ನ ವಿಮಾನ ಹಾರಾಟ ಸೇವೆ ಸ್ಥಗಿತಗೊಳಿಸಿದೆ. ಇದರ ಸಂಪೂರ್ಣ ಲಾಭವನ್ನು ದೇಶದ ಅತಿದೊಡ್ಡ ಸರಕು ಹಾಗೂ ಪ್ರಯಾಣಿಕ ವಾಹಕ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಾಚಿಕೊಳ್ಳಲು ಮುಂದಾಗಿದೆ.

ಇಂದಿನ ಲಾಭಾಂಶದ ಆಧಾರ ಮೇಲೆ ಮುಂದಿನ ಕೆಲವು ವರ್ಷ ಅಥವಾ ತಿಂಗಳಲ್ಲಿ ತನ್ನ ಸೇವಾ ವಿಸ್ತರಣೆ ಸಾಮರ್ಥ್ಯವನ್ನು ಹಿಗ್ಗಿಸುವ ಯೋಜನೆಗಳನ್ನು ಇಂಡಿಗೋ ರೂಪಿಸುತ್ತಿದೆ. ಅಧಿಕ ವಿಮಾಗಳ ಹಾರಾಟ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕದ ಮೂಲಕ ಹೆಚ್ಚಿನ ಆದಾಯ ನಿರೀಕ್ಷೆ ಇರಿಸಿಕೊಂಡಿದೆ ಎಂದು ಪಿಡಬ್ಲ್ಯೂಸಿ ಪಾಲುದಾರ ಧೀರಾಜ್ ಮಾಥೂರ್ ಹೇಳಿದ್ದಾರೆ.

ಪ್ರಸ್ತುತ ಇಂಡಿಗೋ 200 ವಿಮಾನಗಳಿಂದ ನಿತ್ಯ 1,400 ಹಾರಾಟ ನಡೆಸುತ್ತಿದ್ದು, 53 ದೇಶಿಯ ಹಾಗೂ 18 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಶೇ 43.4ರಷ್ಟು ಪಾಲು ಹೊಂದಿದ್ದು, ಆಕ್ರಮಣಕಾರಿ ಸ್ಟ್ರಾಟರ್ಜಿ ಮೂಲಕ ಸೇವಾ ಪರದೆಯನ್ನು ಇನ್ನಷ್ಟು ವಿಸ್ತರಿಸುವ ಮಹತ್ವಕಾಂಕ್ಷೆ ಇರಿಸಿಕೊಂಡಿದೆ.

ವಾಯುಯಾನ ಮಾರುಕಟ್ಟೆ ಪಾಲು ಇನ್ಫೋಗ್ರಾಫಿಕ್​

ಪ್ರಸಕ್ತ ಮಾರುಕಟ್ಟೆಯ ಪಾಲು ಮತ್ತು ದೇಶಿಯ ಮಾರುಕಟ್ಟೆ ನಿಭಾಯಿಸುವ ಸಾಮರ್ಥ್ಯದಡಿ ಉದ್ಯಮದ ಲೀಡರ್​ ಯಾರಾಗುತ್ತಾರೆ ಎಂಬುದು ನಿರ್ಧಾರವಾಗುತ್ತದೆ. ಅದರಲ್ಲಿ ಇಂಡಿಗೋ ಬಳಿಕ ಸ್ಪೈಸ್​ ಜೆಟ್​ ಕೂಡ ಎರಡನೇ ಅತ್ಯಧಿಕ ಲಾಭ ಪಡೆದುಕೊಳ್ಳಲಿದೆ. ಉಳಿದ ಸಂಸ್ಥೆಗಳು ನಂತರದ ಸ್ಥಾನದಲ್ಲಿ ಮುಂದುವರಿಯಲಿವೆ.

ಏರ್ ​​ಇಂಡಿಯಾ, ಗೋ ಏರ್, ವಿಸ್ತಾರಾ, ಏರ್ ಏಷ್ಯಾ, ಜೆಟ್​ಲೈಟ್​ ಸಂಸ್ಥೆಗಳು ಸ್ಪೈಸ್​ ಜೆಟ್​ ನಂತರದ ಮಾರುಕಟ್ಟೆ ಪಾಲುದಾರಿಕೆ ಹೊಂದಿವೆ. ಕಡಿಮೆ ವೆಚ್ಚದ ವಾಹಕ ಸ್ಪೈಸ್ ಜೆಟ್ ಶೇ 13.7ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಎರಡನೇ ಅತಿ ದೊಡ್ಡ ಸಂಸ್ಥೆಯಾಗಿದೆ. ಇದು 48 ಬೋಯಿಂಗ್ 737, 27 ಬೊಂಬಾರ್ಡಿಯರ್ ಕ್ಯೂ-400 ಹಾಗೂ ಒಂದು ಬಿ737 ಸರಕು ವಿಮಾನಗಳನ್ನ ಹೊಂದಿದೆ.

Last Updated : Apr 20, 2019, 5:28 PM IST

For All Latest Updates

TAGGED:

ABOUT THE AUTHOR

...view details